ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮ ಮಾಡುತ್ತೇವೆ - ಅನಂತ ಕುಮಾರ್ ಹೆಗಡೆ
Sunday, January 14, 2024
ಕಾರವಾರ: ಅಯೋಧ್ಯೆಯ ಬಾಬರಿ ಮಸೀದಿ ನಿರ್ನಾಮವಾದ ಸಾಲಿಗೆ ಭಟ್ಕಳದ ಚಿನ್ನದ ಪಳ್ಳಿಯೂ ಸೇರಲಿದೆ. ಇದನ್ನು ಬೇಕಾದರೆ ಬೆದರಿಕೆ ಎಂದೇ ತಿಳಿಯಿರಿ. ಬಾಬ್ರಿ ಮಸೀದಿ ನಿರ್ನಾಮದಂತೆ ಮಾಡುವುದು ಗ್ಯಾರಂಟಿ. ಇದು ಹಿಂದೂ ಸಮಾಜದ ತೀರ್ಮಾನ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿದ್ದೆಯಿಂದ ಎದ್ದಿರುವ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡತೊಡಗಿದ್ದಾರೆ. ಕುಮಟಾದಲ್ಲಿ ರಾಮಮಂದಿರ ಆಮಂತ್ರಣ ಕುರಿತ ಕಾರ್ಯಕ್ರಮದಲ್ಲಿ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಿನ್ನದ ಪಳ್ಳಿ ಮಸೀದಿ ಇರುವುದು ಶಿರಸಿಯ ಸಿಪಿ ಬಜಾರಲ್ಲಿರುವ ವಿಜಯ ವಿಠಲ ದೇವಸ್ಥಾನದಲ್ಲಿ. ಶ್ರೀರಂಗ ಪಟ್ಟಣದಲ್ಲಿರುವ ದೊಡ್ಡ ಮಸೀದಿ ಅದು ಮಾರುತಿ ದೇವಸ್ಥಾನ. ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ. ಅದನ್ನು ಕಿತ್ತುಹಾಕುವ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಕೂತುಕೊಳ್ಳೋದಿಲ್ಲ. ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ.
ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ ಎಂದು ಹೇಳಿದ ಅವರು, ನಮ್ಮ ವಿರೋಧಿ ಕಾಂಗ್ರೆಸ್ ಅಲ್ಲ. ಅಲ್ಲಿರುವ ಕೆಲವರ ಮಾನಸೀಕತೆ ಅಷ್ಟೇ. ಮುರುಕುರಾಮಯ್ಯನಂತಹ ಮಾನಸಿಕತೆಯೇ ನಮ್ಮ ವಿರೋಧಿ. ಗತಿಕೆಟ್ಟ ಹರಾಜಾಗಿ ಹೋದಂತಹ, ಅಲ್ಪಸಂಖ್ಯಾತ ಓಟಿಗಾಗಿ ಓಲೈಸುವ ಮಾನಸಿಕತೆಗೆ ನಮ್ಮ ವಿರೋಧ. ರಾಮಜನ್ಮಭೂಮಿ ಆಮಂತ್ರಣ ಬಂದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಯನ್ನೇ ಅಣಕಿಸಿ ಮುಖ್ಯಮಂತ್ರಿಯ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.