ಟ್ರೇಡಿಂಗ್ app ನಿಂದ ಹೆಚ್ಚಿನ ಲಾಭಾಂಶದ ಆಮಿಷ- ಉಡುಪಿಯಲ್ಲಿ ವ್ಯಕ್ತಿಗೆ ಒಂದು ಕೋಟಿಗೂ ಅಧಿಕ ವಂಚನೆ!
ಉಡುಪಿ: ಟ್ರೇಡಿಂಗ್ app ನಿಂದ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಒಂದು ಕೋಟಿಗೂ ಅಧಿಕ ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲೆವೂರಿನ ವೆಂಕಟರಮಣ ಎಂಬವರಿಗೆ ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್ಆ್ಯಪ್ ಅಪ್ಲಿಕೇಶನ್ ನಲ್ಲಿ ಸಂಪರ್ಕಿಸಿ, ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ ಟ್ರೇಡಿಂಗ್ ಆ್ಯಪ್‌ನ ಲಿಂಕ್ ಕಳುಹಿಸಿದ್ದಾರೆ.
ಇದನ್ನು ನಂಬಿದ ಪಿರ್ಯಾದಿದಾರರು ಲಿಂಕ್‌ನಿಂದ Choice Equity Broking Pvt Ltd ಮಾಡಿಕೊಂಡು ಮಾಹಿತಿಯನ್ನು ನಮೂದಿಸಿ ನಂತರದಲ್ಲಿ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ 05/12/2023 ರಿಂದ ದಿನಾಂಕ 09/01/2024 ರ ತನಕ ಹಂತ ಹಂತವಾಗಿ ರೂಪಾಯಿ 1,38,99,000/- ಹಣವನ್ನು ಪಾವತಿಸಿದ್ದಾರೆ.
ಆದರೆ, ಈ ತನಕ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನು ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
I