BEEF ತಿನ್ನುವ ಪೋಟೋ ಹಾಕಿ ಗೋಮಾಂಸ ಉದ್ಯಮದ ಬಗ್ಗೆ ಘೋಷಿಸಿದ ಫೇಸ್ಟುಕ್ ಸಂಸ್ಥಾಪಕ ಜುಕರ್
Thursday, January 11, 2024
ನ್ಯೂಯಾರ್ಕ್: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಇದೀಗ ಗೋಮಾಂಸ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.
ತಮ್ಮ ಮುಂದೆ ಇರುವ ಬೀಫ್ ಆಹಾರದ ತಟ್ಟೆ ಮತ್ತು ತಾವು ನಗುತ್ತಿರುವ ಫೋಟೋವೊಂದನ್ನು ಹಂಚಿಕೊಂಡು ಈ ಬಗ್ಗೆ ತಮ್ಮ ಖಾತೆಯಲ್ಲಿ ಬರೆದುಕೊಂಡಿರುವ ಜುಕರ್‌ಬರ್ಗ್, 'ಪ್ರಪಂಚದಲ್ಲಿಯೇ ಅತ್ಯುತ್ತಮ ಗುಣಮುಟ್ಟದ ಗೋಮಾಂಸ ವನ್ನು ಉತ್ಪಾದಿಸುವ ಉದ್ದೇಶದಿಂದ ನಾನು ಕೌವೈನಲ್ಲಿರುವ ಕೊಯೊಲ್ ಗೋಮಾಳದಲ್ಲಿ ಜಾನುವಾರುಗಳನ್ನು ಸಾಕುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
ಅಲ್ಲದೇ 'ಜಾನುವಾರುಗಳಿಗೆ ಆಹಾರವಾಗಿ ಡ್ರೈಪ್ಯೂಟ್ಸ್ ಮತ್ತು ಮೆಕಾಡೆಮಿಯಾ ಕಾಯಿ (ಪೌಷ್ಠಿಕ ಕಾಯಿ) ನೀಡುತ್ತಿದ್ದೇನೆ. ಅಲ್ಲದೇ ಗೋಮಾಳದಲ್ಲಿ ನಾವೇ ಉತ್ಪಾದಿಸುವ ಬಿಯರ್ (ಮದ್ಯ) ಕುಡಿಸುತ್ತೇವೆ' ಎಂದು ತಿಳಿಸಿದ್ದಾರೆ. ಅಮೆರಿಕದಲ್ಲಿ ಇಷ್ಟ ಪಡುವ ಆಂಗಸ್ ಎನ್ನುವ ಸ್ಕಾಟಿಷ್‌ನ ಸಣ್ಣ ಹಸುವಿನ ತಳಿ, ವ್ಯಾಗು ಸೇರಿದಂತೆ ನಾಲ್ಕು ರೀತಿಯ ಜಪಾನಿನ ಪ್ರಮುಖ ಜಾನುವಾರುಗಳನ್ನು ಮಾರ್ಕ್ ಸಾಕಿದ್ದಾಗಿ ತಿಳಿಸಿದ್ದಾರೆ.