ಉಡುಪಿ – ಶಾರದಾ ಇಂಟರ್‌ನ್ಯಾಶನಲ್ ಹೋಟೆಲ್ ಮಾಲೀಕ, ಆಪತ್ಕಾಲದಲ್ಲಿ BJP ಅಭ್ಯರ್ಥಿಯಾಗಿದ್ದ ಬಿ ಸುಧಾಕರ ಶೆಟ್ಟಿ ನಿಧನ
Thursday, January 4, 2024
ಉಡುಪಿ:ಉಡುಪಿ ಕರಾವಳಿ ಬೈಪಾಸ್ ರೋಡ್ ನ ಶಾರದಾ ಇಂಟರ್‌ನ್ಯಾಶನಲ್ ಹೋಟೆಲ್ ಮಾಲೀಕ ಬಿ ಸುಧಾಕರ ಶೆಟ್ಟಿ ಅವರು ಇಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶಾರದಾ ಇಂಟರ್‌ನ್ಯಾಷನಲ್ ಹೋಟೆಲ್ ಮಾಲೀಕರಾಗಿದ್ದ ಸುಧಾಕರ ಶೆಟ್ಟಿ ಹೋಟೆಲ್ ಉದ್ಯಮದ ಜತೆಗೆ ರಾಜಕೀಯವಾಗಿಯೂ ಬೆಳೆದಿದ್ದರು. 2009ರಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 1999, 2004 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
2013 ರಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ವಿರುದ್ದ ಇದ್ದ ಆಕ್ರೋಶದ ಮಧ್ಯೆ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಪ್ರಗತಿಪರ ಕೃಷಿಕ ಹಾಗೂ ಹೋಟೆಲ್ ಉದ್ಯಮಿಯಾಗಿದ್ದ ಸುಧಾಕರ ಶೆಟ್ಟಿ , ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮತ್ತು ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.