ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಯುವ ಮೋರ್ಚಾ - BJP ವಿವಿಧ ಮೋರ್ಚಾಗಳಿಗೆ ಪ್ರ.ಕಾರ್ಯದರ್ಶಿಗಳ ನೇಮಕ
ಬೆಂಗಳೂರು : ಬಿಜೆಪಿಯ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳನ್ನು ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಣೆ ನೀಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಹರೀಶ್ ಪೂಂಜಾ ಎರಡನೇ ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿದ್ದಾರೆ.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳರನ್ನು ಎಸ್‌ಸಿ ಮೋರ್ಚಾ ಪ್ರಧಾನ ಕಾವ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಮಹಿಳಾ ಮೋರ್ಚಾ- ಶಿಲ್ಪಾಜಿ ಸುವರ್ಣ (ಉಡುಪಿ) ಮತ್ತು ಡಾ.ಶೋಭಾ ಸಂಗನಗೌಡ (ಹಾವೇರಿ), ಯುವ ಮೋರ್ಚಾ- ಹರೀಶ್ ಪೂಂಜಾ (ದಕ್ಷಿಣ ಕನ್ನಡ) ಹಾಗೂ ಸಂದೀಪ್ ರವಿ (ಬೆಂಗಳೂರು), ಎಸ್‌ಟಿ ಮೋರ್ಚಾ- ಕೃಷ್ಣಾ ನಾಯಕ್ (ಮೈಸೂರು) ಮತ್ತು ಬಸವರಾಜ ಹುಂದ್ರಿ (ಚಿಕ್ಕೋಡಿ), ಎಸ್‌ಸಿ ಮೋರ್ಚಾ- ಉಮೇಶ್ ಕಾರಜೋಳ (ಬಾಗಲಕೋಟೆ) ಹಾಗೂ ಮಹೇಂದ್ರ ಕೌತಾಳ (ಧಾರವಾಡ), ಹಿಂದುಳಿದ ವರ್ಗಗಳ ಮೋರ್ಚಾ- ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ) ಮತ್ತು ಸೋಮಶೇಖರ್ (ಬೆಂಗಳೂರು), ರೈತ ಮೋರ್ಚಾ- ಡಾ.ಬಿ.ಸಿ.ನವೀನ್‌ಕುಮಾರ್ (ಕೊಡಗು) ಹಾಗೂ ಕಲ್ಮರುಡಪ್ಪ (ಚಿಕ್ಕಮಗಳೂರು), ಅಲ್ಪಸಂಖ್ಯಾತ ಮೋರ್ಚಾ- ಇಂದ್ರಕುಮಾರ್ (ಬೆಂಗಳೂರು) ಮತ್ತು ರೌಫುದ್ದೀನ್ ಕಛೇರಿವಾಲೆ (ಬೀದರ್).