-->
CJI ಮುಂದೆಯೇ ವಿಸ್ಕಿ ಬಾಟಲಿ ತಂದಿಟ್ಟ ವಕೀಲ!

CJI ಮುಂದೆಯೇ ವಿಸ್ಕಿ ಬಾಟಲಿ ತಂದಿಟ್ಟ ವಕೀಲ!


ಹೊಸದಿಲ್ಲಿ: ಟ್ರೇಡ್‌ಮಾರ್ಕ್ ಉಲ್ಲಂಘನೆ. ಪ್ರಕರಣವೊಂದರ ಅರ್ಜಿ ಆಲಿಸುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮುಂದೆಯೇ ವಕೀಲರು 2 ವಿಸ್ಕಿ ಬಾಟಲಿಗಳನ್ನು ಸುಪ್ರೀಂನ ತಂದಿಟ್ಟಿದ್ದಾರೆ.

 ಪೆನಾರ್ಡ್ ರಿಚರ್ಡ್ಸ್ ಹಾಗೂ ಜೆ.ಕೆ.ಎಂಟರ್ ಲ್ಲೊಂದು ಪೈಸಸ್ ಎಂಬ ಮದ್ಯ ತಯಾರಿಕ ಸಂಸ್ಥೆಗಳ ಅಪರೂಪದ ನಡುವೆ 'ಲಂಡನ್ ಪೈಡ್' ಎಂಬ ಹೆಸರನ್ನು ಬಳಸಿ ಬೆಳವಣಿಗೆ ಮದ್ಯ ತಯಾರಿಸುವ ಬಗ್ಗೆ ವಿವಾದ ಏರ್ಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಜೆ.ಕೆ. ಸಂಸ್ಥೆಯ ಉತ್ಪಾದನೆಗೆ ತಡೆ ನೀಡುವಂತೆ ಕೋರಿ ರಿಚರ್ಡ್ಸ್ ಸಂಸ್ಥೆ ಮಧ್ಯಪ್ರದೇಶ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ತಡೆ ನೀಡಲು ನಿರಾಕರಿಸಿದ ಹಿನ್ನೆಲೆ ಇದನ್ನು - ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಸುಪ್ರೀಂನಲ್ಲಿ ವಿಚಾರಣೆ ವೇಳೆ ವಕೀಲ ಮುಕುಲ್ ರೋಹಗಿ ಅವರು ಸಿಜೆಐ ಸಮ್ಮತಿ ಪಡೆದು . ನ್ಯಾಯಪೀಠದ ಮುಂದೆಯೇ ಎರಡೂ ಸಂಸ್ಥೆಗಳ ಮದ್ಯದ ಬಾಟಲಿ ತಂದಿಟ್ಟಿದ್ದಾರೆ. ಈ ವೇಳೆ ಸಿಜೆಐ ನಕ್ಕು 'ನೀವು ಬಾಟಲಿಗಳನ್ನೂ ಜತೆಗೆ ತಂದಿರುವಿರೇ' ಎಂದು ಛೇಡಿಸಿದ್ದಾರೆ. ವಿಚಾರಣೆ ಬಳಿಕ ಈ ಬಾಟಲಿಗಳನ್ನು ನಾನು ಕೊಂಡೊಯ್ಯಬಹುದೇ ಎಂದೂ ವಕೀಲರು ಕೇಳಿದ್ದು ಸಿಜೆಐ ನಗುತ್ತಾ'ದಯವಿಟ್ಟುಕೊಂಡು ಹೋಗಿ' ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article