ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ನಾಲೆಯಲ್ಲಿ ಪತ್ತೆ
Sunday, January 14, 2024
ಗುರುಗ್ರಾಮ (ಹರ್ಯಾಣ): ಗುರುಗ್ರಾಮದ ಹೊಟೇಲೊಂದರಲ್ಲಿ ಜನವರಿ 3ರಂದು ಸಂಶಯಾಸ್ಪದ ರೀತಿಯಲ್ಲಿ ಕೊಲೆಯಾಗಿದ್ದ 27 ವರ್ಷದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಹರಿಯಾಣದ ತೋಹ್ನಾದಲ್ಲಿನ ನಾಲೆಯೊಂದರಲ್ಲಿ ಪತ್ತೆಯಾಗಿದೆ.
ಗುರುಗ್ರಾಮ ಪೊಲೀಸರ ಪ್ರಕಾರ, ದಿವ್ಯಾ ಪಹುಜಾರ ಮೃತದೇಹದ ಭಾವಚಿತ್ರವನ್ನು ಅವರ ಕುಟುಂಬದ ಸದಸ್ಯರಿಗೆ ರವಾನಿಸಲಾಗಿದೆ. ಆಗ ಅವರು ಆಕೆಯ ಮೃತದೇಹವನ್ನು ಗುರುತಿಸಿದರು ಎಂದು ಹೇಳಿದ್ದಾರೆ.
ದಿವ್ಯಾ ಪಹುಜಾರ ಮೃತದೇಹವನ್ನು ಪತ್ತೆ ಹಚ್ಚಲು ಗುರುಗ್ರಾಮ ಪೊಲೀಸರ ಆರು ತಂಡಗಳನ್ನು ರಚಿಸಲಾಗಿತ್ತು.