ಮೂತ್ರ ಮಾಡಲು ಹೋದ ಗುಜಿರಿ ವ್ಯಾಪಾರಿ ಸ್ಲ್ಯಾಬ್ ಕುಸಿದುಬಿದ್ದು ದಾರುಣ ಸಾವು
Tuesday, January 30, 2024
ಶಿವಮೊಗ್ಗ: ಮೂತ್ರ ಮಾಡಲೆಂದು ಹೋಗಿ ಚರಂಡಿಗೆ ಮುಚ್ಚಿದ್ದ ಸ್ಲ್ಯಾಬ್ ಕುಸಿದು ಬಿದ್ದು ಹತ್ತು ಅಡಿ ಆಳದ ಚರಂಡಿಗೆ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ದುರ್ಘಟನೆ ಶಿವಮೊಗ್ಗ ನಗರದ ವಿನೋಬನಗರ ರೈಲ್ವೆ ಬ್ಯಾರಲಲ್ ರಸ್ತೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ (45) ಮೃತಪಟ್ಟ ದುರ್ದೈವಿ.
ಗುಜಿರಿ ವ್ಯಾಪಾರ ಮಾಡುತ್ತಿದ್ದ ಮುತ್ತಪ್ಪ, ಮೂತ್ರ ವಿಸರ್ಜನೆಗೆಂದು ಹೋಗಿದ್ದರು. ಆಗ ಏಕಾಏಕಿ ಚರಂಡಿಯ ಸ್ಲ್ಯಾಬ್ ಕುಸಿದು ಬಿದ್ದಿದೆ. ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಮುತ್ತಪ್ಪನ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದಿದೆ. ಕಲ್ಲು ಬಿದ್ದ ರಭಸಕ್ಕೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಕಾಮಗಾರಿಯಿಂದಲೇ ಮಾಡಲಾಗಿದೆ. ಕಳಪೆ ಮತ್ತಪ್ಪ ಮೃತಪಟ್ಟಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜತೆಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.