-->
ಮೆಟಾವರ್ಸ್ ಗೇಮ್: ಬಾಲಕಿಯ ಮೇಲೆ DIGITAL ಗ್ಯಾಂಗ್‌ರೇಪ್!

ಮೆಟಾವರ್ಸ್ ಗೇಮ್: ಬಾಲಕಿಯ ಮೇಲೆ DIGITAL ಗ್ಯಾಂಗ್‌ರೇಪ್!



ಲಂಡನ್: ಮೆಟಾವರ್ಸ್ ಗೇಮ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ DIGITAL ( ವರ್ಚುವಲ್)  ಆಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಲಂಡನ್‌ನಲ್ಲಿ ವರದಿಯಾಗಿದೆ.


 ಈ ಸಂಬಂಧ ಬ್ರಿಟನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ರೀತಿಯ ಘಟನೆ ದಾಖಲಾಗಿ ರುವುದು ಇದೇ ಪ್ರಥಮ.


ಮಾಲ್‌ವೊಂದರಲ್ಲಿ ಬಾಲಕಿ ವರ್ಚುವಲ್ ರಿಯಾಲಿಟಿ(ವಿಆರ್) ಹೆಡ್‌ಸೆಟ್ ಹಾಕಿ ಕೊಂಡು, ಅದರಲ್ಲೇ ಸಂಪೂರ್ಣವಾಗಿ ತಲ್ಲೀನವಾಗುವ ಆಟ ಆಡುತ್ತಿದ್ದಳು. ಈ ವೇಳೆ ಆಟದಲ್ಲಿ ಅವಳ 'ಅವತಾರ್' ಪಾತ್ರದ ಮೇಲೆ ಹಲವು ಪುರುಷ ಅವತಾರ್' ಪಾತ್ರಗಳು ಲೈಂಗಿಕ ದೌರ್ಜನ್ಯ ನಡೆಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 


'ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಬಾಲಕಿಯ ಮೇಲೆ ದೈಹಿಕವಾಗಿ ಅತ್ಯಾಚಾರ ನಡೆಯದಿದ್ದರೂ ಆಕೆ ಮಾನಸಿಕ ಹಿಂಸೆ ಅನುಭವಿಸಿದ್ದಾಳೆ. ಮಾನಸಿಕವಾಗಿ ಜರ್ಝರಿತಳಾಗಿದ್ದಾಳೆ. ಈ ರೀತಿಯ ಗೇಮ್ ಗಳು ಆರೋಗ್ಯಕರವಲ್ಲ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಏನಿದು ಪ್ರಕರಣ? ಮೆಟಾವರ್ಸ್ ಎನ್ನುವುದೊಂದು ಆನ್‌ಲೈನ್‌ ಜಗತ್ತು. ಇಲ್ಲಿ ಹೆಡ್‌ಸೆಟ್‌ ಹಾಕಿಕೊಂಡರೆ, ಆತ ವರ್ಚು ವಲ್ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಸುತ್ತಾಡಬಹುದು. ಯಾರೊಂದಿಗೆ ಬೇಕಾದರೂ ಎದುರಿಗೆ ನಿಂತಂತೆ ವ್ಯವಹಾರ ನಡೆಸಬಹುದು. ಇಂಥದ್ದೇ ಮೆಟಾವರ್ಸ್‌ನ ಆಟವೊಂ ದರಲ್ಲಿ ಭಾಗಿಯಾಗಿದ್ದ ವೇಳೆ ಬಾಲಕಿ ಮೇಲೆ ಅದೇ ಆಟದಲ್ಲಿ ಭಾಗಿ ಯಾಗಿದ್ದ ತಂಡವೊಂದು ವರ್ಚು ವಲ್ ಆಗಿ 'ಗ್ಯಾಂಗ್‌ರೇಪ್' ಮಾಡಿದೆ. ಈ ಘಟನೆಯಿಂದ ಬಾಲಕಿ ಸಂಪೂರ್ಣವಾಗಿ ತಲ್ಲಣಿಸಿ ಹೋಗಿದ್ದು ದೈಹಿಕವಾಗಿ ಗ್ಯಾಂಗ್‌ ರೇಪ್ ನಡೆದಷ್ಟೇ ಪ್ರಮಾಣದಲ್ಲಿ ಮಾನಸಿಕವಾಗಿ ನೊಂದಿದ್ದಾಳೆ. ಆಕೆಗೆ ಈ ಆಘಾತ ದಿಂದ ಹೊರಬರುವುದು ಸಾಧ್ಯವಾ ಗುತ್ತಿಲ್ಲ. ಬ್ರಿಟನ್‌ನಲ್ಲಿ ಇಂಥ ಪ್ರಕರಣ ಇದೇ ಮೊದಲು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಬಾಲಕಿ ಮೆಟಾವರ್ಸ್‌ನಲ್ಲಿ ಯಾವ ಆಟ ಆಡುತ್ತಿದ್ದಳು ಎಂಬುದು ಬಹಿರಂಗವಾಗಿಲ್ಲ.


Ads on article

Advertise in articles 1

advertising articles 2

Advertise under the article