-->
ಮಂಗಳೂರು: ಡಗ್ಸ್, ಕೋಮುವಾದದ ವಿರುದ್ಧ ಮುಲಾಜಿಲ್ಲದೆ ಕ್ರಮ - ಪಶ್ಚಿಮ ವಲಯ ನೂತನ ಡಿಐಜಿಪಿ ಅಮಿತ್ ಸಿಂಗ್

ಮಂಗಳೂರು: ಡಗ್ಸ್, ಕೋಮುವಾದದ ವಿರುದ್ಧ ಮುಲಾಜಿಲ್ಲದೆ ಕ್ರಮ - ಪಶ್ಚಿಮ ವಲಯ ನೂತನ ಡಿಐಜಿಪಿ ಅಮಿತ್ ಸಿಂಗ್

ಮಂಗಳೂರು: ಡಗ್ಸ್, ಕೋಮುವಾದದ ರೀತಿಯಂತಹ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುತ್ತದೆ ಎಂದು ಪಶ್ಚಿಮ ವಲಯ ನೂತನ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿಪಿ) ಅಮಿತ್ ಸಿಂಗ್ ಹೇಳಿದ್ದಾರೆ.

ನೂತನ ಡಿಐಜಿಪಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸದ್ಯ ಅಪರಾಧ ಕೃತ್ಯದ ಸ್ವರೂಪವೇ ಬದಲಾಗಿದೆ. ಕಳವಿಗಿಂತಲೂ ಡ್ರಗ್ಸ್, ಆರ್ಥಿಕ ಅಪರಾಧ, ಸೈಬರ್ ಅಪರಾಧದಂತಹ 'ವೈಟ್ ಕಾಲರ್ ಅಪರಾಧಗಳು ಅಧಿಕವಾಗುತ್ತಿದೆ. ಇಂತಹ ಕೃತ್ಯಗಳನ್ನು ಬೇಧಿಸುವುದೇ ಪೊಲೀಸರಿಗೆ ಸವಾಲಿನ ಸಂಗತಿ. ಹತ್ತು ವರ್ಷಗಳ ಹಿಂದಿನ ಅಪರಾಧಕ್ಕೂ ಈಗಿನ ಅಪರಾಧಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೋಮುವಾದದಂತಹ ಕೃತ್ಯಗಳಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣದ ವಿರುದ್ಧವೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ. ಸೈಬರ್ ಅಪರಾಧಗಳ ಬಗ್ಗೆ ಜನತೆ ಸಾಕಷ್ಟು ಜಾಗರೂಕರಾಗಬೇಕು ಎಂದರು.

2007ನೇ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿರುವ ಅಮಿತ್ ಸಿಂಗ್ ಅವರು 2009-2011 ವರೆಗೆ ಎಎಸ್ಪಿಯಾಗಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು‌.  2011ರಿಂದ ಹಾಸನ, ಕಲಬುರಗಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ನಾಲ್ಕು ವರ್ಷಗಳಲ್ಲಿ ಎನ್ಐಎಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಪಶ್ಚಿಮ ವಲಯ ನೂತನ ಉಪ ಪೊಲೀಸ್ ಮಹಾನಿರೀಕ್ಷಕರಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article