ಲಂಡನ್ ಘಟಿಕೋತ್ಸವ ವೇದಿಕೆಯಲ್ಲೇ ಜೈ ಶ್ರೀರಾಂ !
Monday, January 29, 2024
ಲಂಡನ್: ಬ್ರಿಟನ್‌ನ ಲೀಸೆಸ್ಟರ್ ವಿಶ್ವವಿದ್ಯಾನಿ ಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಪದವಿ ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಯೊಬ್ಬ ವೇದಿಕೆ ಮೇಲೆಯೇ ಜೈ ಸಿಯಾ ರಾಮ್ ಎಂದು ಘೋಷಣೆ ಹಾಕಿದ್ದು, ಈ ವೀಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪದವಿ ಸ್ವೀಕರಿಸಿದ ಬಳಿಕ ವೇದಿಕೆ ಮೇಲೆ ವಿದ್ಯಾರ್ಥಿ ಘೋಷಣೆ ಹಾಕಿದ್ದು, ಸಮಾರಂಭ ವೀಕ್ಷಿಸುತ್ತಿದ್ದ ಹಲವು ವಿದ್ಯಾರ್ಥಿಗಳು ಕೂಡ ದನಿಗೂಡಿಸಿದ್ದಾರೆ.
ಈ ವೀಡಿಯೋ ಯಾವ ದಿನಾಂಕದ್ದು ಮತ್ತು ವಿದ್ಯಾರ್ಥಿ ಯಾರು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹಲವಾರು ನೆಟ್ಟಿಗರು ವೀಡಿಯೋವನ್ನು ಶೇರ್ ಮಾಡಿ ಪ್ರಶಂಸಿಸಿದ್ದರೆ, ಮತ್ತೂ ಕೆಲವರು ಶಿಕ್ಷಣ ವೇದಿಕೆಗಳಲ್ಲಿ ಧಾರ್ಮಿಕ ಘೋಷಣೆಗಳು ಸರಿ ಅಲ್ಲವೆಂದು ಆಕ್ಷೇಪಿಸಿದ್ದಾರೆ.