-->
Kadaba:-ಬಿಜೆಪಿ ಸಭೆಯಿಂದ ಹೊರ ನಡೆದ ವಿಚಾರ, ಸತ್ಯಕ್ಕೆ ದೂರವಾದ ಮಾತು..ಕೇಂದ್ರ ಸಚಿವ ಭಗವಂತ್ ಖೂಬ

Kadaba:-ಬಿಜೆಪಿ ಸಭೆಯಿಂದ ಹೊರ ನಡೆದ ವಿಚಾರ, ಸತ್ಯಕ್ಕೆ ದೂರವಾದ ಮಾತು..ಕೇಂದ್ರ ಸಚಿವ ಭಗವಂತ್ ಖೂಬ

ಕಡಬ

ದೇಶದ ಸಮಗ್ರ ಅಭಿವೃದ್ಧಿಯ ಕಲ್ಪನೆ, ಸರ್ವ ಜನರ ವಿಕಾಸದ ಕನಸು,ಮಾದರಿ ಅಭಿವೃದ್ಧಿ ಕಾರ್ಯಗಳಿಂದ ನರೇಂದ್ರ ಮೋದಿಯವರ ಆದರ್ಶ ಗ್ರಾಮದ ಕನಸು ಸಾಕಾರಗೊಂಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರಾದ ಭಗವಂತ್ ಖೂಬಾ ಅವರು ಹೇಳಿದ್ದಾರೆ. 

ಗ್ರಾಮವಿಕಾಸ ಪ್ರತಿಷ್ಠಾನ ಬಳ್ಳ- ಕೇನ್ಯ ಗ್ರಾಮ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಕಡಬ ತಾಲೂಕಿನ ಬಳ್ಪ ಗ್ರಾಮದ ಬಳ್ಪ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಸಂಸದರ ಆದರ್ಶ ಗ್ರಾಮ ಬಳ್ಪದ ಗ್ರಾಮೋತ್ಸವ-2024 ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಂಸದರಿಗೆ ಮಾತ್ರ ಅಲ್ಲಾ ಜನಸೇವೆ ಮಾಡುವ, ಅಭಿವೃದ್ಧಿ ಮಾಡುವ ಕಳಕಳಿ ಇರುವ ಎಲ್ಲಾ ಜನಪ್ರತಿನಿಧಿಗಳಿಗೆ ಆದರ್ಶ ಗ್ರಾಮ ಕಲ್ಪನೆಯು ಒಂದು ಮಾದರಿಯಾಗಬೇಕು. ಕಲ್ಪನೆಗೂ ಮೀರಿದ ಅಭಿವೃದ್ಧಿಯ ಮೂಲಕ ಬಳ್ಪ ಗ್ರಾಮವು ದೇಶಕ್ಕೆ ಮಾದರಿಯಾಗಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗಬೇಕು, ಧರ್ಮ ರಹಿತ, ಜಾತಿ ರಹಿತ ಲಿಂಗ ಭೇದ ರಹಿತವಾಗಿ ಯುವಜನತೆ, ಮಹಿಳೆಯರ ಅಭಿವೃದ್ಧಿ ಆಗಬೇಕು ಎಂದು ಕನಸು ಕಂಡವರು ನರೇಂದ್ರ ಮೋದಿಯವರು. ವಿಶ್ವ ನಾಯಕನಾಗಿ ಬೆಳೆದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬಡವರಿಗೆ ಸೌಲಭ್ಯಗಳು ನೇರವಾಗಿ ತಲುಪಿಸಿ ಬಡವರ ಬದುಕನ್ನು ಹಸನುಗೊಳಿಸಿದ್ದಾರೆ.ದೇಶದ 13 ಕೋಟಿ ಬಡವರ ಬದುಕು ಉತ್ತಮವಾಗಿದೆ ಎಂದು ಅವರು ಹೇಳಿದರು. ಮೋದಿ ಅವರ ಆಡಳಿತ ಅವಧಿಯಲ್ಲಿ ರೈಲ್ವೇ, ರಸ್ತೆ, ವಿಮಾನ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ದೇಶ ಅಭಿವೃದ್ಧಿಯ ನಾಗಾಲೋಟ ಕಂಡಿದೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಎಂದು ಅವರು ಹೇಳಿದರು.
ಬಿಜೆಪಿ ಸಭೆಯಿಂದ ಸಚಿವ ಭಗವಂತ ಖೂಬಾ ಹೊರ ನಡೆದ ವಿಚಾರದ ಬಗ್ಗೆ ಮಾತನಾಡಿ, ಅದು ಸತ್ಯಕ್ಕೆ ದೂರವಾದ ಮಾತು, ಮಾಧ್ಯಮಗಳ ಸುದ್ದಿಯನ್ನು ನಾನು ನೋಡಿದೆ.
ಆ ಸಭೆಯಲ್ಲಿ ಪ್ರತೀ ಲೋಕಸಭಾ ಕ್ಷೇತ್ರದ ಸ್ಥಿತಿಗತಿ ಹಾಗೂ ವಿಚಾರಗಳು ಚರ್ಚೆ ಆಗಿದೆ.ಅಲ್ಲಿ ವಿರೋಧ ಪಕ್ಷದ ಚಟುವಟಿಕೆಗಳ ಬಗ್ಗೆ ಮತ್ತು ಲೋಕಸಭಾ ಸಿದ್ದತಾ ಸಭೆ ನಡೆದಿದೆ ಹೊರತು ಅಲ್ಲಿ ಯಾರ ಪರ ವಿರೋಧ ಅಭಿಪ್ರಾಯದ ಸಭೆ, ಚರ್ಚೆ ನಡೆದಿಲ್ಲ. ಟಿಕೆಟ್ ಹಂಚಿಕೆ ಕೇಂದ್ರದವರು ಅನೇಕ ಆಯಾಮ ಮತ್ತು ಮಾನದಂಡಗಳಲ್ಲಿ ಮಾಡ್ತಾರೆ,
ಅದು ಬಿಟ್ಟು ಅಂತ ಯಾವುದೇ ಘಟನೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾಗಿದೆ. ನಿನ್ನೆ ರಾತ್ರಿ ಬಂದ ನನ್ನ ಟಿಪಿ ನೋಡಿ, ಅದರಲ್ಲಿ 12 ಗಂಟೆಗೆ ಹೊರಡಬೇಕು ಅಂತ ಇದೆ. ನಾನು ರಾಜ್ಯಾಧ್ಯಕ್ಷರ ಅನುಮತಿ ಕೇಳಿಯೇ ಹೊರಗೆ ಬಂದಿದ್ದೇನೆ, ಸಂಜೆ 5 ಗಂಟೆ ಹೊತ್ತಿಗೆ ಕಡಬದ ಬಳ್ಪದ ಕಾರ್ಯಕ್ರಮಕ್ಕೆ ಬರಬೇಕಿತ್ತು
ಇದನ್ನ ಒಂದು ತಿಂಗಳ ಹಿಂದೆಯೇ ನಾನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಬೀದರ್ ಮತ್ತು ಕಲಬುರ್ಗಿ ಚರ್ಚೆ ಮುಗಿಸಿ ಹೊರ ಬಂದೆ
ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಮಾಧಾನಕ್ಕೆ ಪಕ್ಷದಲ್ಲಿ ಯಾವ ಸ್ಥಾನ. ಪಕ್ಷದಲ್ಲಿ
ಒಂದು ವ್ಯವಸ್ಥೆ ಇರುತ್ತೆ, ಎಲ್ಲರನ್ನೂ ಕೂಡಿಸೋದು, ಅದು ಪಕ್ಷದಲ್ಲಿ ನಡೆಯುತ್ತೆ
ಯಾರ ಅಸಮಾಧಾನವೂ ಪಕ್ಷದಲ್ಲಿ ಕೆಲಸಕ್ಕೆ ಬರಲ್ಲ. ತಮ್ಮ ಅಭಿಪ್ರಾಯ ಕೇಳಿದಾಗ ಹೇಳುವ ವ್ಯವಸ್ಥೆ ಪಕ್ಷದಲ್ಲಿ ಇದೆ.ಹೀಗಾಗಿ ಇಂಥದ್ದರಲ್ಲಿ ಅಸಮಾಧಾನಕ್ಕೆ ಯಾವುದೇ ಆಸ್ಪದ ಇಲ್ಲ ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಭಾಗವಹಿಸಿದ್ದರು.

ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ,ಬಳ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಳಲೆ, ಬಳ್ಪ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್‌ ಬುಡೆಂಗಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಸಚಿವ ಭಗವಂತ್ ಖೂಬಾ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

Ads on article

Advertise in articles 1

advertising articles 2

Advertise under the article