KUNDAPURA- ಹೋಟೆಲ್ ನಲ್ಲಿ ಊಟದ ವೇಳೆ ಹೃದಯಾಘಾತ: ಸಾವು
Monday, January 8, 2024
ಕುಂದಾಪುರ, ಜ. 7: ಕೋಟೇಶ್ವರದಲ್ಲಿ ಹೊಟೇಲ್‌ಗೆ ಊಟಕ್ಕೆ ಹೋದಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆ.
ವಡೇರಹೋಬಳಿ ಗ್ರಾಮದ ಶಿವಾನಂದ (42) ಅವರು ಕೋಟೇಶ್ವರದ ಕಾಗೇರಿಗೆ ಕೂಲಿ ಕೆಲಸಕ್ಕೆಂದು ಹೋಗಿದ್ದು, ಮಧ್ಯಾಹ್ನ ಕೋಟೇಶ್ವರದ ಹೋಟೆಲ್ ಒಂದಕ್ಕೆ ಉದಯ ಅವರ ಜತೆ ಊಟಕ್ಕೆಂದು ಹೋದವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅಲ್ಲಿಂದ ಶಿವಾನಂದ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಶಿವಾನಂದ ಮೃತ ಪಟ್ಟಿದ್ದಾಗಿ ತಿಳಿಸಿದ್ದಾರೆ. ಮೃತರ ಸಹೋದರ ಉದಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.