LIFE CERTIFICATE ಅಪ್ಡೇಟ್ ಹೆಸರಿನಲ್ಲಿ ಲಕ್ಷಾಂತರ ವಂಚನೆ
Tuesday, January 2, 2024
ಮಣಿಪಾಲ: ಬ್ಯಾಂಕ್ ಖಾತೆಯ ವಿವರ ಪಡೆದು ಆನ್‌ಲೈನ್ ಮೂಲಕ ಲಕ್ಷಾಂತರ ರೂ. ಎಗರಿಸಿದ ಘಟನೆ ನಡೆದಿದೆ.
ಮಣಿಪಾಲದ ವಿಜೇಂದ್ರನ್ ಅವರಿಗೆ 'ನಿಮ್ಮ ತಾಯಿಯಾದ ಸುಶೀಲಾ ಎಸ್.ಅವರ ಲೈಫ್ ಸರ್ಟಿಫಿಕೇಟ್ ಬ್ಯಾಂಕ್‌ನಲ್ಲಿ ಅಪ್‌ಡೇಟ್ ಆಗಲಿಲ್ಲ ಎಂಬುದಾಗಿ ಪೋಸ್ಟ್ ಬಂದಿತ್ತು.
ಅದರಂತೆ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ
ಕರೆ ಸ್ವೀಕರಿಸಲಿಲ್ಲ. ಅನಂತರ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಅದರಲ್ಲಿ ಅವರು ಕೆನರಾ ಬ್ಯಾಂಕ್ ನ ನೌಕರ ಎಂಬುದಾಗಿ ಪರಿಚಯಿಸಿಕೊಂಡು, ' ತಾಯಿಯ ಲೈಫ್ ಸರ್ಟಿಫಿಕೇಟ್ ಅಪ್‌ಡೇಟ್ ಮಾಡಲು ಲಿಂಕ್ ಕಳುಹಿಸಿದರು.
ಬಳಿಕ 99,999, ಮತ್ತೆ 99,990 ಅನಂತರ 50,000ರೂ. ಹಣ ಡ್ರಾ ಆಗಿ ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆಯಾಗಿತ್ತು.