Mangalore: ನಟ ರಿಷಭ್ ಶೆಟ್ಟಿಗೆ ಅಭಯ ನೀಡಿದ ಮೈಸಂದಾಯ ದೈವ- video
Sunday, January 7, 2024
ಮಂಗಳೂರು: ಕಾಂತಾರದ ಯಶಸ್ಸಿನಿಂದ ಕಾಂತಾರ ಚಾಪ್ಟರ್ ಒನ್ ಸಿನಿಮಾ ಮಾಡಲು ಹೊರಟಿರುವ ನಟ, ನಿರ್ದೇಶಕ ರಿಷಭ್ ಶೆಟ್ಟಿಯವರು ಗುರುಪುರ ವಜ್ರದೇಹಿ ಮಠದ ಜಾತ್ರೆಯ ಸಂದರ್ಭ ನಡೆದ ನೇಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮೈಸಂದಾಯ ದೈವ ರಿಷಭ್ ಶೆಟ್ಟಿಯವರಿಗೆ ಅಭಯ ನೀಡಿದೆ.
ಗುರುಪುರ ವಜ್ರದೇಹಿ ಮಠದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ನಿನ್ನೆ ರಾತ್ರೆ ಮೈಸಂದಾಯ ಹಾಗೂ ಲೆಕ್ಕೇಸಿರಿ ದೈವದ ನೇಮ ನಡೆದಿತ್ತು. ಈ ನೇಮದಲ್ಲಿ ರಿಷಭ್ ಶೆಟ್ಟಿಯವರು ಹಾಜರಿದ್ದರು. ಈ ವೇಳೆ ಕಾಂತಾರ ಸಿನಿಮಾಕ್ಕೆ ಮೈಸಂದಾಯ ದೈವ ಆಶೀರ್ವಾದಿಸಿ ಅಭಯ ನೀಡಿದೆ. ಯಾವುದಕ್ಕೂ ಭಯ ಪಡಬೇಡ.. ಮುನ್ನುಗ್ಗು ಎಂದು ರಿಷಬ್ ಶೆಟ್ಟಿಯವರ ತಲೆ ಸವರಿ ದೈವದ ಆಶೀರ್ವದಿಸಿದೆ.