-->
"ಮಿಸ್ಟರ್ ಮದಿಮಯೆ" ಕರಾವಳಿಯಾದ್ಯಂತ  ತೆರೆಗೆ

"ಮಿಸ್ಟರ್ ಮದಿಮಯೆ" ಕರಾವಳಿಯಾದ್ಯಂತ ತೆರೆಗೆ


ಮಂಗಳೂರು: ಎಮ್ ಎಮ್ ಎಮ್ ಗ್ರೂಪ್ಸ್  ಬ್ಯಾನರ್ ನಡಿಯಲ್ಲಿ ನಿರ್ಮಾಣವಾದ   "ಮಿಸ್ಟರ್ ಮದಿಮಯೆ'’ ತುಳು ಸಿನಿಮಾ  ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು.

ಬಳಿಕ ಮಾತಾಡಿದ ಆರ್.ಕೆ. ನಾಯರ್ ಅವರು, "ಇಂದು ದೇಶ ವಿದೇಶಗಳಲ್ಲಿ ತುಳು ಸಿನಿಮಾ ಬಿಡುಗಡೆಯಾಗುತ್ತಿದೆ. ತುಳುವರು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ. ತುಳು ಭಾಷೆ ಬೆಳವಣಿಗೆಗೆ ಇದರಿಂದ ಸಹಾಯವಾಗುತ್ತದೆ. ಮಿ. ಮದಿಮಯೆ ಸಿನಿಮಾ ಗೆಲ್ಲಲಿ. ತುಳು ಭಾಷೆಯಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳು ಬರಲಿ" ಎಂದು ಶುಭ ಹಾರೈಸಿದರು.
ಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್ ಮಾತನಾಡಿ, "ಇಂದು ತುಳು ಸಿನಿಮಾಗಳಿಗೆ ಉಡುಪಿ, ಮಂಗಳೂರಿನಲ್ಲಿ ಥಿಯೇಟರ್ ಕೊಡುತ್ತಿಲ್ಲ ಅನ್ನುವುದು ಬೇಸರದ ವಿಚಾರ. ಇಂತಹ ಬೆಳವಣಿಗೆ ನಿಲ್ಲಬೇಕು. ತುಳು ಭಾಷೆಯ ಸಿನಿಮಾಗಳಿಗೆ ಮೊದಲ ಪ್ರಾಶಸ್ತ್ಯ ಸಿಗಬೇಕು. ತುಳುವರು ಒಗ್ಗಟ್ಟಾಗಿ ಸಿನಿಮಾವನ್ನು ಗೆಲ್ಲಿಸಬೇಕು" ಎಂದರು.


ಬಳಿಕ ಮಾತಾಡಿದ ಹಾಸ್ಯನಟ ಭೋಜರಾಜ್ ವಾಮಂಜೂರ್ ಮಾತಾಡಿ, "ತುಳು ಭಾಷೆಯಲ್ಲಿ ಹೊಸಬರ ತಂಡ ಕಷ್ಟಪಟ್ಟು ಮಾಡಿರುವ ಸಿನಿಮಾ ಮಿ. ಮದಿಮಯೆ. ಎಲ್ಲರೂ ಸಿನಿಮಾ ನೋಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ" ಎಂದರು.


ವೇದಿಕೆಯಲ್ಲಿ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಪ್ರಕಾಶ್ ಪಾಂಡೇಶ್ವರ್, ಇಸ್ಮಾಯಿಲ್ ಮೂಡುಶೆಡ್ಡೆ, ಮುಹಮ್ಮದ್ ಆತಿಫ್, ತಸ್ಲೀಮ್, ತಮ್ಮ ಲಕ್ಷ್ಮಣ, ರಾಜೇಶ್ ಗುರೂಜಿ, ರಾಹುಲ್ ಅಮೀನ್, ನಾಯಕ ನಟ ಸಾಯಿಕೃಷ್ಣ ಕುಡ್ಲ, ನಾಯಕಿ ಶ್ವೇತಾ ಸುವರ್ಣ, ಜ್ಯೋತಿಷ್ ಶೆಟ್ಟಿ, ನಿರ್ಮಾಪಕ ಮಿಥುನ್ ಕೆ ಎಸ್, ಚೇತನ್, ರಾಜೇಶ್ ಫೆರಾವೋ, ನಿರ್ದೇಶಕ ನವೀನ್ ಕೆ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿಯಾದ್ಯಂತ ಏಕಕಾಲಕ್ಕೆ ರಿಲೀಸ್:

ಮಿಸ್ಟರ್ ಮದಿಮಯೆ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಬೆಳ್ತಂಗಡಿಯಲ್ಲಿ ಭಾರತ್ , ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ. ಮಂಗಳೂರಿನ ರೂಪವಾಣಿ ಮತ್ತು ಉಡುಪಿಯ ಕಲ್ಪನಾ ಥಿಯೇಟರ್ ನಲ್ಲಿ ಜ.19ರಂದು ಬಿಡುಗಡೆಗೊಳ್ಳಲಿದೆ.

ನವೀನ್ ಜಿ ಪೂಜಾರಿ ಅವರ ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿ ಕೃಷ್ಣ ಕುಡ್ಲ ಅವರು ನಟಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ,  ಸುನೀಲ್ ನೆಲ್ಲಿಗುಡ್ಡೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ರವಿ ರಾಮಕುಂಜ, ಪ್ರಕಾಶ್ ಪಾಂಡೇಶ್ವರ್, ಕಾಮಿಡಿ  ಗ್ಯಾಂಗ್ ಖ್ಯಾತಿಯ ಮನೀಷ್ ಶೆಟ್ಟಿ ಉಪ್ಪಿರ,  ಅಕ್ಷಯ್ ಸರಿಪಲ್ಲ, ಸಂದೀಪ್ ಶೆಟ್ಟಿ ರಾಯಿ,  ಶರಣ್ ಕೈಕಂಬ, ಪ್ರವೀಣ್ ಮರ್ಕಮೆ,  ಉತ್ಸವ್ ವಾಮಂಜೂರು, ಸವ್ಯರಾಜ್ ಕಲ್ಲಡ್ಕ,  ಪ್ರಥ್ವಿನ್ ಪೊಳಲಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಮಿಥುನ್ ಕೆ ಎಸ್ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ   ರಾಜೇಶ್ ಫೇರವೋ ಅವರು ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ  ಕೆ ಪಿ ಮಿಲನ್ ಸಂಗೀತ ಹಾಗು ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಕೌರವ್ ವೆಂಕಟೇಶ್ ರವರ ಸಾಹಸ ಸುಕೇಶ್ ಶೆಟ್ಟಿ ,ಜಿ.ಎಸ್ ಗುರುಪುರ ಅವರ ಸಾಹಿತ್ಯ,   ಸುಜೀತ್  ನಾಯಕ್ ರವರ ಸಂಕಲನ ಇದೆ‌. ಚಿತ್ರವನ್ನು ಸಚಿನ್ ಎ ಎಸ್ ಉಪ್ಪಿನಂಗಡಿ ಕರಾವಳಿದ್ಯಾದಂತ ವಿತರಿಸುತ್ತಿದ್ದಾರೆ. 

ವಸ್ತ್ರಾಲಂಕಾರ ನಿಖಿತಾ ಕೋಟ್ಯಾನ್, ನಿರ್ಮಾಣ ನಿರ್ವಾಹಕರಾಗಿ ಶ್ರೇಯಸ್ ಶೆಟ್ಟಿ, ಚಿತ್ರ ಮೇಲ್ವಿಚಾರಕರಾಗಿ ಹೆರಾಲ್ಡ್ ವಾಲ್ಡರ್, ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಚೇತನ್ ಮತ್ತು ಸೌಜನ್ಯ ಶೆಟ್ಟಿ ಚಿತ್ರಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಚಿತ್ರದ ಕ್ರಿಯೇಟಿವ್ ಹೆಡ್ - ಬಚ್ಚನ್ ಚೇತು ರವರು ಚಿತ್ರದ ಪ್ರತಿ ಹಂತದಲ್ಲೂ ಬೆನ್ನುಲುಬಾಗಿ ನಿಂತಿದ್ದಾರೆ.

ಕಥಾ ಸಾರಾಂಶ
ಮದುವೆ ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ. ಜೊತೆಗೆ ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನಿಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನತೆಯಿಂದ ಹೊಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಿದೆ. 
ಈಗಾಗಲೇ ಪ್ರೀಮಿಯರ್ ಷೋ ಮೂಲಕ ಸಿನಿಮಾ ತೆರೆಕಂಡಿದ್ದು, ಪ್ರೇಕ್ಷಕರು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ.    ಚಿತ್ರದ 3 ಹಾಡುಗಳು ತುಂಬಾ ಚೆನ್ನಾಗಿದೆ.
ಕಲಾಭಿಮಾನಿಗಳು  ಹೊಸಬರ ಪ್ರಯತ್ನವನ್ನು  ಮೆಚ್ಚಿ  ಕೊಂಡಾಡಿದ್ದಾರೆ.

Ads on article

Advertise in articles 1

advertising articles 2

Advertise under the article