ಮೈ ಕಾಣಿಸುವ ಬಟ್ಟೆ ಧರಿಸುತ್ತಾಳೆಂಬ ಕೋಪಕ್ಕೆ ಪತ್ನಿಯ ಕತ್ತು ಸೀಳಿ ಕೊಂದೇ ಬಿಟ್ಟ ಪತಿರಾಯ
Monday, January 1, 2024
ಹಾಸನ: ಮೈಕಾಣಿಸುವ ಉಡುಪು ತೊಡುತ್ತಾಳೆಂಬ ಕೋಪದಲ್ಲಿ ಪತ್ನಿಯ ಕತ್ತು ಸೀಳಿ ಪತಿಯೇ ಹತ್ಯೆಗೈದಿರುವ ಘಟನೆಯೊಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ(22) ಕೊಲೆಯಾದ ಗೃಹಿಣಿ. ಜೀವನ್ ಕೊಲೆಗೈದ ಆರೋಪಿ.
ಧಾರವಾಡ ಮೂಲದ ಜ್ಯೋತಿ ಹಾಗೂ ಜೀವನ್ ಪರಸ್ಪರ ಪ್ರೀತಿಸಿ ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಹಾಸನ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಜ್ಯೋತಿಗೆ ತುಂಡುಡುಗೆ ತೊಡುವುದು, ಮಾಡರ್ನ್ ಉಡುಪು ಧರಿಸುವುದಂದ್ರೆ ಇಷ್ಟ. ಆದರೆ ಜೀವನ್‌ಗೆ ಅದು ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ಇಬ್ಬರ ನಡುವೆ ಬಟ್ಟೆ ತೊಡುವ ವಿಚಾರಕ್ಕೆ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಆದರೆ ಶನಿವಾರ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.
ಜ್ಯೋತಿ ಮಾಡರ್ನ್ ಉಡುಪು ಧರಿಸಿ ಹೊರಗಡೆ ಹೊರಟಿದ್ದಳು. ಆಗ ಜೀವನ್, ತಾನೇ ಡ್ರಾಪ್ ಕೊಡುತ್ತೇನೆಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಕತ್ತು ಸೀಳಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.