ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಆಕಸ್ಮಿಕ ಘಟನೆಯೆಂದು ಬಿಂಬಿಸಲು ಹೊರಟ ಹೊಟೇಲ್ ಮ್ಯಾನೇಜರ್ ಅರೆಸ್ಟ್
ನವದೆಹಲಿ: ಐಷಾರಾಮಿ ಹೊಟೇಲ್ ಮ್ಯಾನೇಜರ್ ತನ್ನ ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಕೊಂದು ಆಕಸ್ಮಿಕವಾಗಿ ನೀರೆನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆಂದು ಬಿಂಬಿಸಲು ಯತ್ನಿಸಿ, ಇದೀಗ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.
ಲಕ್ನೋ ಮೂಲದ ಗೋವಾದಲ್ಲಿ ಐಷಾರಾಮಿ ಹೊಟೇಲ್ ಮ್ಯಾನೇಜರ್ ಗೌರವ್ ಕಟಿಯಾರ್(29) ಪತ್ನಿಯನ್ನೇ ಹತ್ಯೆ ಮಾಡಿದ ಆರೋಪಿ. ಇವರ ಪತ್ನಿ ದೀಕ್ಷಾ ಗಂಗ್ವಾರ್ (27) ಪತಿಯಿಂದಲೇ ಕೊಲೆಯಾದ ದುರ್ದೈವಿ. ಕೊಲೆಗೈದ ಬಳಿಕ ಆಕಸ್ಮಿಕ ಘಟನೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಆದರೆ ಸಮುದ್ರದ ಬದಿಯಲ್ಲಿ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ ವೀಡಿಯೊ ಅದು ಕೊಲೆ ಎಂಬುದನ್ನು ಬಹಿರಂಗಪಡಿಸಿದೆ.
ಐಷಾರಾಮಿ ಹೋಟೆಲ್‌ನ ಮ್ಯಾನೇಜರ್ ಗೌರವ್ ಕಟಿಯಾರ್ ಅನ್ನು ಗೋವಾದ ಕಾಬೋ ಡಿ ರಾಮಾ ಬೀಚ್‌ನಲ್ಲಿ ತನ್ನ ಪತ್ನಿಯನ್ನು ಮುಳುಗಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಪೊಲೀಸರು ದೀಕ್ಷಾಅ ಗಂಗ್ವಾರ್ ಮೃತದೇಹವನ್ನು ಬೀಚ್ ಬಳಿ ಪತ್ತೆ ಮಾಡಿದ್ದಾರೆ. ಗೌರವ್ ಕಟಿಯಾರ್ ಅವರು ಒಂದು ವರ್ಷದ ಹಿಂದೆ ವಿವಾಹವಾದ ದೀಕ್ಷಾ ಗಂಗ್ವಾರ್ ಅವರನ್ನು ತಮ್ಮ ವಿವಾಹೇತರ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.
ಆಕೆಯನ್ನು ಕಡಲತೀರದ ಕಲ್ಲಿನ ಪ್ರದೇಶಕ್ಕೆ ಕರೆದೊಯ್ದು ಸಮುದ್ರದಲ್ಲಿ ಮುಳುಗಿಸಿದ್ದಾನೆ. “ಆಕೆಯ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ” ಎಂದು ತಿಳಿದುಬಂದಿದೆ. ಕೊಲೆಗೈದ ಬಳಿಕ, ಕಟಿಯಾರ್ ಬೊಬ್ಬೆ ಹೊಡೆದು ಜನರನ್ನು ಸಹಾಯಕ್ಕಾಗಿ ಕೂಗಿ ಕರೆದು ಘಟನೆಯನ್ನು ಆಕಸ್ಮಿಕ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು ಎಂದು ಪೊಲೀಸರು ಹೇಳಿದರು. ಆದರೆ ಸ್ಥಳೀಯರೊಬ್ಬರು ಚಿತ್ರೀಕರಿಸಿದ ವೀಡಿಯೊ ಕಟಿಯಾರ್ ಅವರ ಕೊಲೆಯನ್ನು ಬಹಿರಂಗಪಡಿಸಿದೆ.