-->
ಐಸೀಸ್ ಸೇರುವಂತೆ ಯುವಕರನ್ನು ಪ್ರಚೋದಿಸುತ್ತಿದ್ದ ಟ್ವಿಟರ್ ಹ್ಯಾಂಡ್ಲರ್ ಮೆಹಿ ಮಸೂರ್ ಬಿಸ್ವಾಸ್ ದೋಷಿ

ಐಸೀಸ್ ಸೇರುವಂತೆ ಯುವಕರನ್ನು ಪ್ರಚೋದಿಸುತ್ತಿದ್ದ ಟ್ವಿಟರ್ ಹ್ಯಾಂಡ್ಲರ್ ಮೆಹಿ ಮಸೂರ್ ಬಿಸ್ವಾಸ್ ದೋಷಿ


ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾದ (ಐಸಿಸ್) ಟ್ವಿಟರ್ ಖಾತೆ ನಿರ್ವಾಹಕ, ಬಂಧಿತ ಉಗ್ರ ಮೆಹಿ ಮಸೂರ್ ಬಿಸ್ವಾಸ್ ದೋಷಿ ಎಂದು ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಿದೆ.

2012ರಲ್ಲಿ ಐಸಿಸ್ ಪರ 'ಶಮ್ಮಿವಿನ್ನೆಸ್' ಟ್ವಿಟರ್ ಖಾತೆಯನ್ನು ತೆರೆದು ಉಗ್ರರು ನಡೆಸುತ್ತಿದ್ದ ರಕ್ತಪಾತ ಹಾಗೂ ಉಗ್ರವಾದವನ್ನು ಪ್ರಚಾರ ಮಾಡಿ ಯುವಜನರನ್ನು ಐಸಿಸ್ ಸಂಘಟನೆ ಸೇರುವಂತೆ ಮೆಹಿ ಪ್ರಚೋದನೆ ನೀಡುತ್ತಿದ್ದ. ಈ ಬಗ್ಗೆ ಇಂಗ್ಲೆಂಡ್ ಮಾಧ್ಯಮ ಸುದ್ದಿ ಪ್ರಸಾರ ಮಾಡಿತ್ತು. ಇದರನ್ವಯ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು, 2014ರ ಡಿ.13ರಂದು ಜಾಲಹಳ್ಳಿಯ ಸಿದ್ದಾರ್ಥನಗರದಲ್ಲಿ ಮೆಹ್ಲಿಯನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 121 (ಭಾರತ ಸರ್ಕಾರದ ವಿರುದ್ಧ ಯುದ್ಧ ಘೋಷಣೆ ಅಥವಾ ಪ್ರಯತ್ನ ನಡೆಸಲು ಪ್ರೋತ್ಸಾಹ), ಐಪಿಸಿ ಸೆಕ್ಷನ್ 125 (ಭಾರತದ ಸ್ನೇಹ ಪೂರ್ವಕವಾಗಿರುವ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಪ್ರಚೋದನೆ ನೀಡಿದ ಆರೋಪ) ಹಾಗೂ 153-ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ ಮತ್ತು ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ನೀಡುವುದು ಹಾಗೂ ಶಾಂತಿ ಕದಡುವುದು) ಆರೋಪದಡಿ 36,986 ಪುಟಗಳ ಚಾರ್ಜೀಟ್ ಸಲ್ಲಿಸಿದ್ದರು.

ಮೆಹಿ ಮಸೂರ್ ಬಿಸ್ವಾಸ್ ಅನ್ನು ಐಪಿಸಿ ಸೆಕ್ಷನ್ 121ರ ಅಪರಾಧದಿಂದ ಖುಲಾಸೆಗೊಳಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಯುಎಪಿಎ ಸೆಕ್ಷನ್‌ಗಳು, ಭಯೋತ್ಪಾದಕ ಕೃತ್ಯಗಳಿಗೆ ನೇಮಕಾತಿ ಮತ್ತು ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವುದು ಸೇರಿ ಇತರ ಆರೋಪಗಳಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ.

ಶಮ್ಮಿವಿಟ್ಟೆಸ್ ಖಾತೆಗೆ 18 ಸಾವಿರ ಮಂದಿ ಬೆಂಬಲಿಗರಿದ್ದರು. ಈತ ಸರಿಸುಮಾರು 1.25 ಲಕ್ಷ ಟ್ವಿಟ್ ಗಳನ್ನು ಮಾಡಿದ್ದ. ಈ ಮೂಲಕ ಹೆಚ್ಚು ಹೆಚ್ಚು ಮಂದಿಯನ್ನು ಸಂರ್ಪಸಿ ಐಸಿಸ್ ಸಂಘಟನೆಗೆ ಸೇರ್ಪಡೆ ಮಾಡುವುದು ಮೆಹಿ ಉದ್ದೇಶವಾಗಿತ್ತು. ಪುಣೆ ಮೂಲದ ಉಗ್ರ ಕಳುಹಿಸುತ್ತಿದ್ದ ಸಂದೇಶಗಳನ್ನು ಪಡೆದು ಮೆಹ್ಲಿ ಟ್ವಿಟ್ ಮಾಡುತ್ತಿದ್ದ. ಇರಾಕ್ ನಲ್ಲಿರುವ ಉಗ್ರರು ಮತ್ತು ಐಸಿಸ್ ಬೆಂಬಲಿಗರು ಮೆಹ್ಲಿ ಸಂದೇಶಗಳನ್ನು ನೋಡಿ ತಮ್ಮ ಮೇಲೆ ಸಾವಿರಾರು ಮಂದಿಗೆ ಕಾಳಜಿ ಇದೆ ಎಂದು ತಿಳಿಯುತ್ತಿದ್ದರು. ಇರಾಕ್‌ನ ವ್ಯಕ್ತಿಯೇ ಟ್ವಿಟರ್ ನಿರ್ವಹಣೆ ಮಾಡುತ್ತಿದ್ದ ಎಂಬುದು ಉಗ್ರರ ನಂಬಿಕೆಯಾಗಿತ್ತು.

Ads on article

Advertise in articles 1

advertising articles 2

Advertise under the article