ಮಂಗಳೂರು: 'ಸಲಾರ್' ತಂಡದೊಂದಿಗೆ ತೆಲುಗುಸ್ಟಾರ್ 'ಪ್ರಭಾಸ್' ಕಟೀಲು ದೇವಸ್ಥಾನಕ್ಕೆ ಭೇಟಿ
Friday, January 12, 2024
ಮಂಗಳೂರು: ತೆಲುಗು ಸ್ಟಾರ್ ನಟ ಪ್ರಭಾಸ್ ಇತ್ತೀಚೆಗೆ ತೆರೆಕಂಡ ಬ್ಲಾಕ್ ಬಾಸ್ಟರ್ ಮೂವಿ ಸಲಾರ್ ಸಿನಿಮಾ ತಂಡದೊಂದಿಗೆ ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ‘ಸಲಾರ್’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಪ್ರಭಾಸ್ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಭಾಸ್ ಅವರೊಂದಿಗೆ ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಂಗದೂರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟನೆಯ ಸಲಾರ್ ಸಿನಿಮಾ 2023 ಡಿಸೆಂಬರ್ 22ರಂದು ಬಿಡುಗಡೆ ಆಗಿತ್ತು. ಪ್ರಭಾಸ್‌ಗೆ ‘ಸಲಾರ್’ ಚಿತ್ರದ ಮೂಲಕ ಮತ್ತೆ ಯಶಸ್ಸು ದೊರಕಿದೆ.