ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್ ಪ್ರಜೆ ಸೀಮಾ ಹೈದರ್ ಈಗ ಗರ್ಭಿಣಿ
Wednesday, January 3, 2024
ಭಾರತಕ್ಕೆ ಆಕ್ರಮವಾಗಿ ಬಂದಿರುವ ಪಾಕಿಸ್ಥಾನಿ ಪ್ರಜೆ ಸೀಮಾ ಹೈದರ್,ಆಕೆಯ ಭಾರತದ ಪತಿ ಸಚಿನ್ ಮೀನಾ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
'ನಾನು ಗರ್ಭಿಣಿಯಾಗಿ ದ್ದೇನೆ. 2024 ನಮಗೆ ಫಲಪ್ರದವಾಗಲಿದೆ ಎಂದು ಆಶಿಸುತ್ತೇನೆ' ಎಂದು ಸೀಮಾ ಹೈದರ್ ಹೇಳಿದ್ದಾರೆ.
2019ರಲ್ಲಿ ಪಬ್ಬಿ ಮೂಲಕ ಸೀಮಾಗೆ ಮೊದಲ ಬಾರಿಗೆ ಲಕ್ಷೆದ ಸಚಿನ್ ಮೀನಾ ಪರಿಚಯವಾ ಯಿತು. ಆ ಸಮಯದಲ್ಲೇ ಪಾಕ್ ಪತಿಯೊಂದಿಗೆ ಸೀಮಾಗೆ 4 ಮಕ್ಕಳಿದ್ದರು. 2023ರ ಮಾರ್ಚ್‌ನಲ್ಲಿ ನೇಪಾಲದಲ್ಲಿ ಸಚಿನ್ ಮತ್ತು ಸೀಮಾ ಭೇಟಿಯಾಗಿ, ಪಶುಪತಿನಾಥ ದೇಗುಲದಲ್ಲಿ ಮದುವೆಯಾದರು.
ಅನಂತರ ನೇಪಾಲದ ಮೂಲಕ ಅಕ್ರಮವಾಗಿ ನಾಲ್ವರು ಮಕ್ಕಳೊಂದಿಗೆ ಸೀಮಾ ಭಾರತ ಪ್ರವೇಶಿದರು. ಕಳೆದ ಮೇಯಲ್ಲಿ ನೋಯ್ಡಾದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ಅನಂತರ ಬಿಡುಗಡೆಗೊಳಿಸಿದ್ದರು.