ರಾಮರಾಜ್ ಜಾಹಿರಾತಿನಲ್ಲಿ ಕಾಣಿಸಿಕೊಂಡ ಡಿವೈನ್ ಸ್ಟಾರ್ - ಮೊದಲ ಜಾಹೀರಾತಿನಲ್ಲಿಯೇ ಎಲ್ಲರ ಗಮನ ಸೆಳೆದ ರಿಷಭ್ ಶೆಟ್ಟಿ
Saturday, January 27, 2024
ಬೆಂಗಳೂರು: ಡಿವೈನ್ ಸ್ಟಾರ್ ಖ್ಯಾತಿಯ ನಟ ರಿಷಬ್ ಶೆಟ್ಟಿ ಜಾಹೀರಾತು ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಈವರೆಗೆ ಯಾವುದೇ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳದ ರಿಷಭ್ ಶೆಟ್ಟಿ ತಮ್ಮ ಮೊದಲ ಜಾಹೀರಾತಿನಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಜಾಹೀರಾತಿನಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಪಂಚೆ ಧರಿಸಿರುವ ರಿಷಭ್ ಶೆಟ್ಟಿಯವರು ಎಲ್ಲರ ಗಮನ ಸೆಳೆದಿದ್ದಾರೆ. ಅಂದಹಾಗೆ ಅವರು ರಾಮರಾಜ್ ರಾಮ್ ರಾಜ್ ಕಾಟನ್ ಸಂಸ್ಥೆಯ ಜಾಹೀರಾತಿನಲ್ಲಿ ರಿಷಭ್ ಕಾಣಿಸಿಕೊಂಡಿದ್ದಾರೆ. ಈ ಜಾಹಿರಾತಿನಲ್ಲಿ ಕಲೆ-ಸಂಸ್ಕೃತಿ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ನಿರೂಪಿಸುವುದರೊಂದಿಗೆ, ಕೆಲವು ವಿಶೇಷತೆಗಳನ್ನೂ ಕೂಡ ಹೇಳಿಕೊಂಡಿದ್ದಾರೆ.
ಈಗಾಗಲೇ ರಾಮ್ ರಾಜ್ ಕಾಟನ್ ಸಂಸ್ಥೆಯ ಜಾಹೀರಾತಿನಲ್ಲಿ ದರ್ಶನ್, ಕಿಚ್ಚ ಸುದೀಪ್, ಶ್ರೀಮುರಳಿ, ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಹೀಗೆ ಎಲ್ಲರೂ ಕಾಣಿಸಿಕೊಂಡಿದ್ದರು. ಸದ್ಯ ಈ ಜಾಹಿರಾತಿನಲ್ಲಿ ರಿಷಭದ ಶೆಟ್ಟಿ ಕಾಣಿಸಿಕೊಂಡು ಕಮಾಲ್ ಮಾಡಿದ್ದಾರೆ. ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದಾರೆ.
ರಾಮರಾಜ್ ತಮ್ಮ ಮುಂಡು, ಶರ್ಟ್‌ಗಳು ಮತ್ತು ಕುರ್ತಾಗಳ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ರಿಷಭ್ ಶೆಟ್ಟಿಯನ್ನು ನೇಮಿಸಿದೆ. ಉತ್ತರ ಭಾರತದ ಮಾರುಕಟ್ಟೆಗೆ ಮುನ್ನುಗ್ಗುವ ಮುನ್ನ ರಾಮರಾಜ್ ದಕ್ಷಿಣ ಭಾರತಕ್ಕೆ ರಿಷಬ್ ಶೆಟ್ಟಿಯವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಅವರನ್ನು ಆಯ್ಕೆ ಮಾಡಿಕೊಂಡಿದೆ.
ರಾಮರಾಜ್ ಕಾಟನ್ ಸಂಸ್ಥೆಯ ನಿರ್ದೇಶಕ ಅರುಣ್ ಈಶ್ವರ್ ಯವರ ರಿಷಭ್ ಶೆಟ್ಟಿ ಅವರೊಂದಿಗಿನ ಒಡನಾಟವು ಬ್ರಾಂಡ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಿಷಭ್ ಶೆಟ್ಟಿ ಅಂಬಾಸಿಡರ್ ಆಗಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಇದು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜಗತ್ತಿಗೆ ತಲುಪಿಸುವ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೆ ಎಂದು ಹೇಳಿದರು.