ಮದುವೆ ಆಗುತ್ತೇನೆಂದು ನಂಬಿಸಿ ಕಾಮದಾಟ ಆಡಿ ಯುವತಿಗೆ ಕೈಕೊಟ್ಟು ಕಣ್ಮರೆಯಾದ ಪೊಲೀಸ್ ಪೇದೆ ವಿರುದ್ಧ ಪ್ರಕರಣ ದಾಖಲು
Thursday, January 25, 2024
ವಿಜಯಪುರ: ಪೊಲೀಸ್ ಪೇದೆಯೊಬ್ಬ ಮದುವೆ ಆಗುತ್ತೇನೆಂದು ನಂಬಿಸಿ ಕಾಮದಾಟ ಆಡಿ ಇದೀಗ ಯುವತಿಗೆ ಕೈಕೊಟ್ಟು ಕಣ್ಮರೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಯುವತಿ ವಿಜಯಪುರ ನಗರದ ಗಾಂಧಿಚೌಕ ಠಾಣೆಯಲ್ಲಿ ಸೇವೆಯಲ್ಲಿರುವ ಪೇದೆಯ ವಿರುದ್ಧವೇ ಯುವತಿ ದೂರು ನೀಡಿದ್ದಾಳೆ.
ವಿಜಯಪುರ ನಗರ ಠಾಣೆಯ ಪೊಲೀಸ್ ಪೇದೆ ವಿನಾಯಕ ಟಕ್ಕಳಕಿ ಎಂಬಾತ ಯುವತಿಯನ್ನು ಅತ್ಯಾಚಾರ ಮಾಡಿ ಕೈಕೊಟ್ಟವನು. ಈತ ಕಳೆದ 20 ದಿನಗಳಿಂದ ಸೇವೆಗೆ ಬಾರದೇ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ತನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿದ ಪೇದೆ ವಿನಾಯಕ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮದುವೆ ಮಾಡಿಕೊಳ್ಳದೇ ತನಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ಪೊಲೀಸ್ ದೂರು ದಾಖಲಿಸಿದ್ದಾಳೆ. ನಗರದ ಮಹಿಳಾ ಠಾಣೆಗೆ ಸಂತ್ರಸ್ತ ಯುವತಿ ಪೇದೆ ವಿನಾಯಕ ಟಕ್ಕಳಕಿ ವಿರುದ್ಧ ದೂರು ನೀಡಿದ್ದಾಳೆ.
ಪೊಲೀಸ್ ಪೇದೆ ಯುವತಿಯೊಂದಿಗೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕವನ್ನು ಮಾಡಿದ್ದಾನೆ. ಆದರೆ ಯಾವಾಗ ಯುವತಿ ತನ್ನನ್ನು ಮದುವೆಯಾಗಬೇಕೆಂದು ದುಂಬಾಲು ಬಿದ್ದಳೋ ಆ ಬಳಿಕದಿಂದ ಕಾನ್ ಸ್ಟೇಬಲ್ ವಿನಾಯಕ ಟಕ್ಕಳಕಿ ಸೇವೆಗೆ ಗೈರು ಹಾಜರಾಗಿ ನಾಪತ್ತೆಯಾಗಿದ್ದಾನೆ. ಕಳೆದ 20 ದಿನಗಳಿಂದ ಗಾಂಧಿ ಚೌಕ್ ಪೊಲೀಸ್ ಠಾಣೆಗೆ ಆತ ಸೇವೆಗೆ ಹಾಜರಾಗಿಲ್ಲ. ಯುವತಿ ಮೇಲೆ ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿನಾಯಕ ಟಕ್ಕಳಕಿ ಪತ್ತೆಗೆ ಬೀಸಿದ್ದಾರೆ.
ಸದ್ಯ ನಾಪತ್ತೆಯಾಗಿರುವ ವಿನಾಯಕ ಟಕ್ಕಳಕಿ ಬಂಧನವಾಗಬೇಕು. ಕಾನೂನಿನ ಪ್ರಕಾರ ಆತನಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಆತ ತನ್ನನ್ನು ಮದುವೆಯಾಗಬೇಕೆಂದು ಯುವತಿ ಪಟ್ಟು ಹಿಡಿದಿದ್ದಾಳೆ. ಪೊಲೀಸ್ ಪೇದೆ ವಿನಾಯಕ ಟಕ್ಕಳಕಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.