SHOCKING- ಮಂಗಳೂರು ಮೂಡ ಆಯುಕ್ತನಿಂದ ಯುವತಿಗೆ ಲೈಂಗಿಕ ಕಿರುಕುಳ
Sunday, January 7, 2024
ಮಂಗಳೂರು: ಮೂಡ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ) ಆಯುಕ್ತರ ಮೇಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸಮಾಡಿಕೊಂಡಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಮುಡಾ ಕಚೇರಿಯ ಆಯುಕ್ತರಾದ ಮನ್ಸೂರು ಆಲಿ ರವರು ಲೈಂಗಿಕ, ಮಾನಸಿಕ, ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಬಗ್ಗೆ ಮಹಿಳೆ ಪೊಲೀಸ್ ಆಯುಕ್ತರಿಗೆ ದಿನಾಂಕ 05-01-2024 ರಂದು ದೂರು ನೀಡಿದಂತೆ ದಿನಾಂಕ 06-01-2024 ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 4/2024,ಕಲಂ 354, 354A, ಐಪಿಸಿ ರಡಿ ಪ್ರಕರಣ ದಾಖಲಾಗಿ ಪ್ರಸ್ತುತ ತನಿಖಾ ಹಂತದಲ್ಲಿರುತ್ತದೆ.