ವಿಯೆಟ್ನಾಂ, ಪೋಲೆಂಡ್‌ನಲ್ಲಿ ಬಾಗಿಲು ಎಳೆದುಕೊಂಡ ZOMATO
Monday, January 8, 2024
ಹೊಸದಿಲ್ಲಿ: ಆನ್‌ಲೈನ್ ಆಹಾರ ಪೂರೈಕೆ ವೇದಿಕೆಯಾದ ZOMATO ಕಂಪೆನಿ ವೆಚ್ಚ ತಗ್ಗಿಸುವ ಭಾಗವಾಗಿ ವಿಯೆಟ್ನಾಂ ಮತ್ತು ಪೋಲೆಂಡ್‌ನಲ್ಲಿರುವ ತನ್ನ ಸಹವರ್ತಿ ಕಂಪೆನಿಗಳನ್ನು ಮುಚ್ಚಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮೂಲಕ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 10 ದೇಶಗಳಲ್ಲಿ ತನ್ನ ಸಹ
ವರ್ತಿ ಕಂಪೆನಿಗಳನ್ನು ZOMATO ಮುಚ್ಚಿದಂತಾಗಿದೆ.
2023ರಲ್ಲಿ ಚಿಲಿ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಪೋರ್ಚುಗಲ್, ಐರ್ಲೆಂಡ್, ಜೋರ್ಡಾನ್, ಜೆಕ್ ಗಣರಾಜ್ಯ ಮತ್ತು ಸ್ಟೋವೇಕಿಯಾದಲ್ಲಿರುವ ತನ್ನ ಸೋದರ ಸಂಸ್ಥೆಗಳ ಬಾಗಿ ಲನ್ನು ZOMATO ಮುಚ್ಚಿತ್ತು. ಇದಕ್ಕೂ ಮುನ್ನ ಕೆನಡಾ, ಅಮೆರಿಕ, ಫಿಲಿಫಿನ್ಸ್,ಯುಕೆ, ಕತಾರ್, ಲೆಬನಾನ್ ಮತ್ತು ಸಿಂಗಾಪುರದಲ್ಲಿ ತನ್ನ ವ್ಯವಹಾರವನ್ನು ಕಂಪೆನಿ ಕೊನೆಗೊಳಿಸಿತು. ಸದ್ಯ ಭಾರತ ಹೊರತುಪಡಿಸಿ, ಇಂಡೋನೇಷ್ಯಾ, ಶ್ರೀಲಂಕಾ ಮತ್ತು ಯುಎಇ ನಲ್ಲಿ ZOMATO ಕಾರ್ಯಾಚರಣೆ ನಡೆಸುತ್ತಿದೆ.