ಪುರುಪೋತ್ತಮನ ಪ್ರಸಂಗ ಚಿತ್ರ ಮಾಚ್೯ 1 ರಂದು ರಾಜ್ಯಾದ್ಯಂತ ತೆರೆಗೆ
Tuesday, February 27, 2024
ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಪುರುಷೋತ್ತಮನ ಪ್ರಸಂಗ ಸಿನಿಮಾ ಮಾಚ್೯ 1 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಒಂದೇ ಹಂತದಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು.
ಮಂಗಳೂರು ಸುತ್ತಮುತ್ತ, ಬಜಪೆ, ಮುರನಗರ, ಕೆಂಜಾರ್ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ದುಬಾಯಿಯಲ್ಲಿ 7 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು.
ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಇಲ್ಲಿ ಕತೆಗೆ ಪೂರಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
ಈ ಸಿನಿಮಾದ ಮೂಲಕ ಅಜಯ್ ಎಂಬ ನವ ನಟನನ್ನು ಹಾಗೂ ರಿಷಿಕಾ ನಾಯ್ಕ್ ಮತ್ತು ದೀಪಿಕಾ ಎಂಬರನ್ನು ದೇವದಾಸ್ ಕಾಪಿಕಾಡ್ ಕನ್ನಡಕ್ಕೆ ಪರಿಚಯಿಸಿದ್ದಾರೆ.
ಹಾಸ್ಯ ದಿಗ್ಗಜರನ್ನೊಳಗೊಂಡ ತಾರಾಗಣದಲ್ಲಿ ಬಹಳಷ್ಟು ಮಂದಿ ಹೊಸಬರಿಗೂ ಅವಕಾಶ ನೀಡಲಾಗಿದೆ.
ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕತೆ ಚಿತ್ರಕತೆ ಸಾಹಿತ್ಯ ಸಂಭಾಷಣೆ ಬರೆದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿ ಕೊಂಡಿದ್ದಾರೆ. ಇವರಿಗೆ ನಿರ್ದೇಶನದಲ್ಲಿ ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ.
ನಿರ್ಮಾಪಕರು: ವಿ. ರವಿ ಕುಮಾರ್.
ತಾರಾಗಣದಲ್ಲಿ ಅಜಯ್ ನಾಯಕ ನಟ ರಿಷಿಕಾ ನಾಯ್ಕ್ (ನಾಯಕಿ) ದೀಪಿಕಾ ( ನಾಯಕಿ) ದೇವದಾಸ್ ಕಾಪಿಕಾಡ್ ನವೀನ್ ಡಿ ಪಡೀಲ್ ಅರವಿಂದ ಬೋಳಾರ್ ಭೋಜರಾಜ ವಾಮಂಜೂರು ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ ಚೇತನ್ ರೈ ಮಾಣಿ
ಜ್ಯೋತಿಷ್ ಶೆಟ್ಟಿ ಹಾಗೂ ಇತರರು ಇದ್ದಾರೆ
ತಾಂತ್ರಿಕ ವರ್ಗ
ಸಹ ನಿರ್ದೇಶನ: ಅರ್ಜುನ್ ಕಾಪಿಕಾಡ್ ಸಹಾಯಕ ನಿರ್ದೇಶನ: ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಕ್ಯಾಮರಾ -ವಿಷ್ಣು, ಸಹಾಯ: ಪುಟ್ಟ, ಸಂಗೀತ - ನಕುಲ್ ಅಭಯಂಕರ್, ವಸ್ತ್ರವಿನ್ಯಾಸ - ಶರತ್ ಪೂಜಾರಿ, ಸಹ ನಿರ್ಮಾಪಕರು- ಅಬೂಬಕರ್ ಪುತ್ತಕ, ಲೈನ್ ಪ್ರೊಡ್ಯುಸರ್ - ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ಟೀಮ್ - ಸಂತೋಷ್, ರಮಾನಂದ, ಮುನ್ನ, ರಾಜೇಶ್.
ಮಾಚ್೯ 1 ರಂದು "ಪುರುಷೋತ್ತಮನ ಪ್ರಸಂಗ" ಹಾಸ್ಯ ಪ್ರಧಾನ ಸಿನಿಮಾ ತೆರೆಗೆ ಬರಲಿದೆ.