ಬೆಂಗಳೂರು: ಇಡ್ಲಿ ಗುರು ಫ್ರಾಂಚೈಸಿ ಹೆಸರಿನಲ್ಲಿ 10ಮಂದಿಗೆ ವಂಚನೆ - ಹೋಟೆಲ್ 'ಇಡ್ಲಿ ಗುರು' ಸಂಸ್ಥಾಪಕ, ಉದ್ಯಮಿ ಕಾರ್ತಿಕ್ ಶೆಟ್ಟಿ ದಂಪತಿ ಅರೆಸ್ಟ್
Wednesday, February 14, 2024
ಬೆಂಗಳೂರು: ಹೋಟೆಲ್ 'ಇಡ್ಲಿ ಗುರು' ಸಂಸ್ಥಾಪಕ, ಉದ್ಯಮಿ ಕಾರ್ತಿಕ್ ಶೆಟ್ಟಿಯನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಇಡ್ಲಿ ಗುರು ಸಂಸ್ಥಾಪಕ, ಉದ್ಯಮಿ ಬಿ. ಕಾರ್ತಿಕ್ ಶೆಟ್ಟಿರೊಂದಿಗೆ ಅವರ ಪತ್ನಿ ಮಂಜುಳಾರನ್ನು ವಂಚನೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ದಂಪತಿ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು. ಕಾರ್ತಿಕ್ ಶೆಟ್ಟಿ ದಂಪತಿ ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದರು ಎಂಬ ದೂರು ಬಂದಿರುವ ಹಿನ್ನಲೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಂಪತಿ ಬೆಂಗಳೂರು ನಗರದಲ್ಲಿ 10ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾರೆ ಎಂಬುದು ಆರೋಪ ಕೇಳೊ ಬಂದಿದೆ.
ಚೇತನ್ ಎಂಬುವವರು ಬಿ. ಕಾರ್ತಿಕ್ ಶೆಟ್ಟಿ, ಮಂಜುಳಾ ಸೇರಿದಂತೆ ಅನೇಕರ ವಿರುದ್ಧ ವಂಚನೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆಯೇ ದಂಪತಿ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು. ಇವರು 3 ಲಕ್ಷಕ್ಕೂ ಅಧಿಕ ನಗದು ವಂಚನೆ ಮಾಡಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ಚೇತನ್ ಮಾಗಡಿ ಮುಖ್ಯ ರಸ್ತೆ ಕೊಟ್ಟಿಗೆಪಾಳ್ಯದಲ್ಲಿರುವ ಇಡ್ಲಿಗುರು ಕಛೇರಿಗೆ ಭೇಟಿ ನೀಡಿದ್ದರು. ಅಲ್ಲಿ ಕಾರ್ತಿಕ್ ಶೆಟ್ಟಿ ತಿಂಗಳಿಗೆ 50 ಸಾವಿರದ ತನಕ ಸಂಪಾದನೆ ಮಾಡಬಹುದು ಎಂದು ನಂಬಿಸಿದ್ದರು. 3 ಲಕ್ಷ ರೂ. ಠೇವಣಿ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಚೇತನ್ ತಮ್ಮ ಮನೆಯ ನೆಲ ಮಹಡಿಯಲ್ಲಿ 9 ಸಾವಿರ ರೂ. ಬಾಡಿಗೆ ಬರುತ್ತಿದ್ದ ಅಂಗಡಿ ಖಾಲಿ ಮಾಡಿಸಿದ್ದರು. ಅಲ್ಲಿ ಕಾರ್ತಿಕ್ ಇಡ್ಲಿ ಗುರು ತೆರೆಯಲು ಒಪ್ಪಿದ್ದರು. ಅಂಗಡಿಯನ್ನು ಹೋಟೆಲ್ ಮಾದರಿ ವಿನ್ಯಾಸಗೊಳಿಸಲು 2 ಲಕ್ಷ ರೂ. ಖರ್ಚು ಮಾಡಿದ್ದರು.
ಆದರೆ ಹೋಟೆಲ್ ಬದಲು ಮೊಬೈಲ್ ಕ್ಯಾಂಟೀನ್ ತಂದು నిలిసి ವ್ಯಾಪಾರ ಆರಂಭಿಸಲಾಗಿತ್ತು. ಆದರೆ ಅಂದುಕೊಂಡಂತೆ ವ್ಯಾಪಾರ ಆಗುತ್ತಿರಲಿಲ್ಲ. ಆಗ ಕಾರ್ತಿಕ್ ಶೆಟ್ಟಿ ಮತ್ತು ಇತರರು ಬೇರೆ ಕಡೆ ವ್ಯಾಪಾರ ಮಾಡೋಣ ಶೇ 10ರಷ್ಟು ಕಮೀಷನ್ ಕೊಡುತ್ತೇವೆ ಎಂದು ಹೇಳಿದ್ದರು.