ಮೆಟ್ರೋದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದರೆ ₹10 ಸಾವಿರ ದಂಡ!
Thursday, February 1, 2024
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ BMRCL ದಂಡದ ಮೊತ್ತವನ್ನು ಬರೋಬ್ಬರಿ 20 ಪಟ್ಟು ಹೆಚ್ಚಿಸಿದೆ.
ಅಸಭ್ಯ ವರ್ತನೆಗೆ ಈ ಮೊದಲು ₹500 ಇದ್ದ ದಂಡವನ್ನು ₹10,000ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು BMRCL ಬಿಎಂಆರ್‌ಸಿಎಲ್ ತಿಳಿಸಿದೆ. ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದರ ಮಧ್ಯೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಕಳೆದ ತಿಂಗಳು (ಜ.2) ವರದಿಯಾಗಿತ್ತು.
ಈ ವೇಳೆ ತಪ್ಪಿತಸ್ಥನಿಗೆ ಮೆಟ್ರೋ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಆ್ಯಕ್ಟ್ ಸೆಕ್ಷನ್ 59, 60, 64ರ ಅಡಿ ₹10,000 ದಂಡ ವಿಧಿಸಲಾಗಿತ್ತು.