-->
ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು 1.98ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾದ ಬುರ್ಖಾಧಾರಿ ಮಹಿಳೆಯರು

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು 1.98ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾದ ಬುರ್ಖಾಧಾರಿ ಮಹಿಳೆಯರು




ಉಡುಪಿ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಯೊಂದಕ್ಕೆ ಬಂದಿರುವ ಮೂವರು ಬುರ್ಖಾಧಾರಿ ಮಹಿಳೆಯರು ನಕಲಿ ಚಿನ್ನಾಭರಣವನ್ನು ಇಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ಅಸಲಿ ಚಿನ್ನಾಭರಣ ಎಗರಿಸಿ ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಕನಕದಾಸ ರಸ್ತೆಯಲ್ಲಿನ ನಿತ್ಯಾನಂದ ಎಂಬವರ ಮಾರುತಿ ಜುವೆಲ್ಲರಿಗೆ ಅಂದಾಜು 35ರಿಂದ 45ವರ್ಷ ಪ್ರಾಯದ ಮೂವರು ಬುರ್ಖಧಾರಿ ಮಹಿಳೆಯರು ಫೆ.18ರಂದು ಗ್ರಾಹಕರಂತೆ ಬಂದಿದ್ದಾರೆ. ಇವರು 15.800 ಗ್ರಾಂ ತೂಕದ ಒಂದು ಚೈನ್ ಹಾಗೂ 10.150 ಗ್ರಾಂ ತೂಕದ ಬ್ರಾಸ್ಲೈಟ್ ಖರೀದಿಸಿದ್ದಾರೆ. ಅದಕ್ಕೆ ಬದಲಾಗಿ ಮಹಿಳೆಯರು ತಮ್ಮ ಬಳಿಯಿದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿದ್ದಾರೆನ್ನಲಾಗಿದೆ.

ಇದರಲ್ಲಿ 48,771 ರೂ. ಉಳಿಕೆ ಹಣದೊಂದಿಗೆ 19,000 ರೂ. ಹಣವನ್ನು ನಗದಾಗಿ ಪಡೆದುಕೊಂಡು ಅಂಗಡಿಯಿಂದ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ವ್ಯವಹಾರದ ಸಂದರ್ಭ ಚೌಕಾಸಿ ಮಾಡಿದ ಮಹಿಳೆಯರು ನಿತ್ಯಾನಂದರ ಗಮನವನ್ನು ಬೇರೆಡೆಗೆ ಸೆಳೆದು, ಪರೀಕ್ಷಿಸಲು ನೀಡಿದ್ದ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನಾಭರಣಗಳನ್ನು ನೀಡಿ 1,98,923ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article