ಬೆಳ್ತಂಗಡಿ: ಬೇರೆ ಬೇರೆಯವರ ಹೆಸರಿನಲ್ಲಿ 42ಸಿಮ್ ಖರೀದಿ - ಅನುಮಾನಾಸ್ಪದ ನಡೆಯ ಅಪ್ರಾಪ್ತ ಸೇರಿದಂತೆ ಐವರು ವಶಕ್ಕೆ
Sunday, February 4, 2024
ಬೆಳ್ತಂಗಡಿ: ಬೇರೆಬೇರೆಯವರ ಹೆಸರಿನಲ್ಲಿ 42 ಸಿಮ್ ಕಾರ್ಡ್ ಖರೀದಿಸಿ ಬೆಂಗಳೂರಿನತ್ತ ಪ್ರಯಾಣಕ್ಕೆ ತಯಾರಾಗಿದ್ದ ಅಪ್ರಾಪ್ತ ಸೇರಿದಂತೆ ಐವರು ಯುವಕರನ್ನು ಧರ್ಮಸ್ಥಳ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಮೀಝ್(20), ಬಂಟ್ವಾಳ ಪಾಂಡವಕಲ್ಲು ನಿವಾಸಿ ಅಕ್ಟರ್ ಆಲಿ(24), ಬೆಳ್ತಂಗಡಿ ಸಂಜಯನಗರ ನಿವಾಸಿ ಮೊಹಮ್ಮದ್ ಮುಸ್ತಫಾ(22), ಬೆಳ್ತಂಗಡಿ ಪಡಂಗಡಿ ನಿವಾಸಿ ಮಹಮ್ಮದ್ ಸಾದಿಕ್(27) ಹಾಗೂ ಬೆಳ್ತಂಗಡಿ ಕಲ್ಮಂಜ ನಿಡಿಗಲ್ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕ ಬಂಧಿತರು.
ಆರೋಪಿಗಳು ಯಾವುದೋ ವ್ಯವಹಾರ ಮಾಡುತ್ತೇವೆಂದು ತಿಳಿಸಿ ಬೇರೆಬೇರೆಯವರ ಹೆಸರಿನಲ್ಲಿ 42 ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದರು. ತಂಡ ಸಿಮ್ ಕಾರ್ಡ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಶಂಕೆಯಿದೆ. ಸದ್ಯ ಆರೋಪಿಗಳಲ್ಲಿದ್ದ 42 ಸಿಮ್ ಕಾರ್ಡ್ ಗಳ ವಶಪಡಿಸಿಕೊಂಡಿದ್ದಾರೆ. ಈ ದಂಧೆಯಲ್ಲಿ ಮತ್ತಷ್ಟು ಮಂದಿ ಸೇರಿರುವ ಸಾಧ್ಯತೆಯಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಮ್ ಕಾರ್ಡ್ ಖರೀದಿಯ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ನಾಲ್ವರು ಯುವಕರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಅಪ್ರಾಪ್ತನನ್ನು ಬಾಲ ನ್ಯಾಯಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ತಂದೆಯೊಂದಿಗೆ ಮನೆಗೆ ಕಳುಹಿಸಲಾಗಿದೆ.