ಕೇರಳ ಲಾಟರಿಯಲ್ಲಿ 70ಲಕ್ಷ ಬಹುಮಾನ ಗೆದ್ದ ಯುವಕ ನೇಣಿಗೆ ಶರಣು
Sunday, February 4, 2024
ಕಾಸರಗೋಡು: ನಾಲ್ಕು ತಿಂಗಳ ಹಿಂದಷ್ಟೇ ಕೇರಳ ರಾಜ್ಯ ಲಾಟರಿಯಲ್ಲಿ 70 ಲಕ್ಷ ರೂ. ಗೆದ್ದಿರುವ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ.
ನೆಲ್ಲಿಕುಂಜದ ಬೀಚ್ ರಸ್ತೆ ನಿವಾಸಿ ವಿವೇಕ್ ಶೆಟ್ಟಿ (36) ಆತ್ಮಹತ್ಯೆಗೆ ಶರಣಾದ ಯುವಕ.
ವಿವೇಕ್ ಶೆಟ್ಟಿ ತನ್ನ ಬೇಕರಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತಕ್ಷಣ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಂಚನಾಮೆ ನಡೆಸಿ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮನೆಯವರಿಗೆ ಒಪ್ಪಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆಯಷ್ಟೇ 70 ಲಕ್ಷ ರೂ. ಕೇರಳ ಲಾಟರಿ ಪ್ರಥಮ ಬಹುಮಾನ ಗೆದ್ದಿದ್ದರು. ಅವರಿಗೆ ತೆರಿಗೆ ಪಾವತಿಯಾಗಿ ಸುಮಾರು 44 ಲಕ್ಷ ರೂ. ಹಣಕೂಡಾ ಲಭಿಸಿತ್ತು. ಆದ್ದರಿಂದ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.