ಮಂಗಳೂರು: ಚಾಲನೆಯಲ್ಲಿದ್ದ ಸ್ಕೂಲ್ ಬಸ್ ನಡಿಗೆ ಬಿದ್ದ ವಿದ್ಯಾರ್ಥಿ - ಸ್ಥಳದಲ್ಲಿರುವವರ ಚೀರಾಟದಿಂದಲೇ ಬದುಕಿ ಬಂದ
Saturday, February 24, 2024
ಮಂಗಳೂರು: ಬಸ್ ಮೂವ್ ಆಗುತ್ತಿದ್ದಾಗಲೇ ರಸ್ತೆ ದಾಟಿದ ವಿದ್ಯಾರ್ಥಿ ಸ್ಕೂಲ್ ಬಸ್ ನಡಿಗೇ ಬಿದ್ದರೂ ಪವಾಡ ಸದೃಶವೆಂಬಂತೆ ಪಾರಾಗಿರುವ ಘಟನೆ ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ನಡೆದಿದೆ.
ನಗರದ ಸುರತ್ಕಲ್ ನ ಆಂಗ್ಲ ಮಾಧ್ಯಮ ಶಾಲೆಯ ಈ ವಿದ್ಯಾರ್ಥಿ ಸ್ಕೂಲ್ ಬಸ್ಸಿನಲ್ಲಿ ಆಗಮಿಸಿ ಮನೆ ಸಮೀಪ ಇಳಿದಿದ್ದಾನೆ. ಆದರೆ ಬಸ್ ಹೊರಡುತ್ತಿದ್ದಾಗಲೇ ಬಸ್ ಮುಂಭಾಗದಲ್ಲೇ ದಾಟಿ ಮನೆಯತ್ತ ಹೋಗಿದ್ದಾನೆ. ಈ ವೇಳೆ ವಿದ್ಯಾರ್ಥಿಯನ್ನು ಗಮನಿಸದ ಚಾಲಕ ಬಸ್ ಅನ್ನು ಮೂವ್ ಮಾಡಿದ್ದಾನೆ. ಪರಿಣಾಮ ಬಾಲಕ ಬಸ್ ನಡಿಗೆ ಬಿದ್ದಿದ್ದಾನೆ.
ಇದನ್ನು ಗಮನಿಸಿದ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ ಹಾಗೂ ಮಹಿಳೆ ಚೀರಾಡಿದ್ದಾರೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದಾನೆ. ಪರಿಣಾಮ ಬಾಲಕ ಬಸ್ ನಡಿಗೆ ಬಿದ್ದರೂ ಪವಾಡ ಸದೃಶವೆಂಬಂತೆ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಸ್ಕೂಲ್ ಬಸ್ ನಲ್ಲಿ ನಿರ್ವಾಹಕ ಇರಲಿಲಿಲ್ಲ ಎಂದು ಹೇಳಲಾಗುತ್ತಿದೆ. ಚಾಲಕನ ವಿರುದ್ದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.