ಆಳ್ವಾಸ್ "ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ: ಪಂಜ, ಮುಲ್ಲಕಾಡು ಶಾಲೆಗಳಿಗೆ ಪ್ರಶಸ್ತಿ
ಆಳ್ವಾಸ್ "ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ: ಪಂಜ, ಮುಲ್ಲಕಾಡು ಶಾಲೆಗಳಿಗೆ ಪ್ರಶಸ್ತಿ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ಯಕ್ಷಧ್ರುವ ಸಮ್ಮಿಲನ ಯಕ್ಷರೂಪಕ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಈ ಸ್ಪರ್ಧೆಯಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ತಂಡ ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಂಡಗಳು ಪ್ರಶಸ್ತಿ ತನ್ನದಾಗಿಸಿಕೊಂಡವು.
ಬೊಟ್ಟಿಕರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ರಾಕೇಶ್ ರೈ ಅಡ್ಕ ನೇತೃತ್ವದ ತಂಡವು ದಶಾವತಾರ ಅಖ್ಯಾನಕ್ಕೆ ಪ್ರಥಮ ತಂಡ ಪ್ರಶಸ್ತಿ ಪಡೆಯಿತು.
ಗುರುಪುರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದಿವಿತ್ ಎಸ್.ಕೆ. ಪೆರಾಡಿ ನೇತೃತ್ವದ ತಂಡವು ಶ್ರೀ ರಾಮಾಯಣ ದರ್ಶನಂ ಅಖ್ಯಾನಕ್ಕೆ ದ್ವಿತೀಯ ಹಾಗೂ ಹರೇಕಳದ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಅಶ್ವತ್ ಮಂಜನಾಡಿ ನೇತೃತ್ವದ ಕ್ಷೀರಾಬ್ದಿ ಮಥನ ಅಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಲಭಿಸಿತು.
ಪ್ರೊ. ಎಂ.ಎ. ಹೆಗಡೆ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಿರೀಶ್ ಗಡಿಕಲ್ಲು ನೇತೃತ್ವದ ತಂಡವು ವಿಶ್ವರೂಪ ಅಖ್ಯಾನಕ್ಕೆ ಪ್ರಥಮ ಪ್ರಶಸ್ತಿ ಒಲಿಯಿತು.