ಸ್ನೇಹಿತರ ಸವಾಲಿಗೆ ಯುವತಿಯ ಮೈ ಮುಟ್ಟಿದ ಕಿಡಿಗೇಡಿ ಬಂಧನ
Thursday, February 1, 2024
ಕೆಲ ದಿನಗಳ ಹಿಂದೆ ಆರ್‌ಪಿಸಿ ಲೇಔಟ್‌ನ ಹೋಟೆಲ್‌ನಲ್ಲಿ ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿ ಗೇಡಿ ಕೊನೆಗೂ ಪರ ಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ.
ಸುಂಕದಕಟ್ಟೆಯ ವಿಶ್ವೇಶ್ವರ ನಗರದ ನಿವಾಸಿ ಚಂದನ್ ಬಂಧಿತನಾಗಿದ್ದು, ಆರ್‌ಪಿಸಿ ಲೇಔಟ್ ಹೋಟೆಲ್‌ಗೆ ತನ್ನ ಸ್ನೇಹಿತರ ಜತೆ ಬಂದಾಗ ಆತ ಈ ಕೃತ್ಯ ಎಸಗಿದ್ದ. ಈ ಬಗ್ಗೆ ಹೋಟೆಲ್ ವ್ಯವಸ್ಥಾಪಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ವಿಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸ್ನೇಹಿತನ ಮಾತು ಕೇಳಿ ಕೃತ್ಯ
ಗ್ಯಾಸ್ ಡೆಲಿವರಿ ಮಾಡುತ್ತಿದ್ದ ಚಂದನ್ ಡಿಸೆಂಬರ್ 30 ರಂದು ರಾತ್ರಿ ಸ್ನೇಹಿತರ ಜೊತೆಗೆ ಹೋಟೆಲ್ ಗೆ ಬಂದಿದ್ದ. ಈ ವೇಳೆ ಹೋಟೆಲ್ ಕ್ಯಾಶ್ ಕೌಂಟರ್ ಬಳಿ ಇದ್ದ ಯುವತಿ ಮೈ ಮುಟ್ಟುವಂತೆ ಸ್ನೇಹಿತರು ಸವಾಲು ಹಾಕಿದ್ದರು. ಈ ಕಾರಣದಿಂದ ಆತ ಕೃತ್ಯ ವೆಸಗಿದ್ದ