ಮಹಿಳೆಗೆ ಅಶ್ಲೀಲ ಸನ್ನೆ: ಖಾಸಗಿ ಉದ್ಯೋಗಿ ಸೆರೆ
Thursday, February 1, 2024
ಬೆಂಗಳೂರು: ಇತ್ತೀಚಿಗೆ ಕಾರಿನಲ್ಲಿ ಕುಳಿತಿದ್ದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೆಬಿ ನಗರದ ಸುನೀಲ್ ಕುಮಾರ್ ಶರ್ಮಾ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಮಹ ದೇವಪುರದ ರಿಂಗ್ ರೋಡ್‌ನಲ್ಲಿ ಮಹಿಳೆಗೆ ಅಶ್ಲೀಲವಾಗಿ ಕೈ ಸನ್ನೆ ಮಾಡಿ ಪರಾರಿಯಾಗಿದ್ದ. ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿ ಶರ್ಮಾ, ಸ್ನೇಹಿತರೊಂದಿಗೆ ಹೋಟೆಲ್‌ಗೆ ಬಂದಿದ್ದ. ಸಂತ್ರಸ್ತೆ- ಸ್ನೇಹಿತರು ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ಕುಳಿತಿದ್ದು, ಆಕೆಗೆ ಕಾರಿಂದ ಹೊರ ಬರುವಂತೆ ಕೈ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ.