ಬಿಎಂಟಿಸಿ ಬಸ್ ಗೆ ಬಂದ ಕ್ಯೂಆರ್ ಕೋಡ್ , ಚಿಲ್ಲರೆಗಾಗಿ ಪರದಾಟ ಮಾಡುವ ಅವಶ್ಯಕತೆ ಇಲ್ಲ
Sunday, February 25, 2024
ಬೆಂಗಳೂರು : ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇನ್ನೂ ಮುಂದೆ ಚಿಲ್ಲರೆಗಾಗಿ ಪರದಾಡುವ ಅವಶ್ಯಕೆತೆ ಇಲ್ಲ ಬಿಎಂಟಿಸಿ ಬಸ್ ಗೆ ಬಂದಿದೆ ಕ್ಯೂಆರ್ ಕೋಡ್ ವ್ಯವಸ್ಥೆ .
ಇನ್ಮುಂದೆ ಬಿಎಂಟಿಸಿ ಬಸ್ ನಲ್ಲಿ ಕ್ಯೂಆರ್ ಕೋಡ್ ಸೌಲಭ್ಯ ಇಲ್ಲದೇ ಹಲವು ಪ್ರಯಾಣಿಕರಿಗೆ ಕಷ್ಟ ಆಗಿತ್ತು ಏಕೆಂದರೆ ಇತ್ತೀಚೆಗೆ ಜೇಬಿನಲ್ಲಿ ಹಣ ಇಡೋದಕ್ಕಿಂತ ಮೊಬೈಲ್ ಮೂಲಕ ಹಣದ ವ್ಯವಹಾರ ಮಾಡುವುದುಸಾಮಾನ್ಯವಾಗಿದೆ ಬಿಎಂಟಿಸಿ ಬಸ್ ತೆರುಳುವಾಗ ಚಿಲ್ಲರೆಗಾಗಿ ಕಂಡಕ್ಟರ್‌ಗಳ ಜೊತೆ ಉಗಿಸಿಕೊಳ್ಳೋದು ಅಭ್ಯಾಸವಾಗಿತ್ತು. ಆದರೆ ಈಗ ಎಂಟಿಸಿಯಲ್ಲಿ ಕ್ಯೂಆರ್ (QR Code) ಸರ್ವಿಸ್ ಇದ್ದು ಪ್ರಯಾಣಿಕರು ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತಿದ್ದಾರೆ. ಹಾಗಾಗಿ ಯುಪಿಐ ಪೇಮೆಂಟ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಎಂಟಿಸಿ ಬಸ್‌ನಲ್ಲಿ ನಿತ್ಯ 35 ಲಕ್ಷಕ್ಕೂ ಅಧಿಕ ಜನ ಸಂಚರಿಸ್ತಿದ್ದಾರೆ.
ಈ ಪೈಕಿ 20 ಲಕ್ಷ ಮಹಿಳೆಯರು ನಿತ್ಯ ಉಚಿತವಾಗಿ ಸಂಚರಿಸಿದ್ರೆ. ಉಳಿದ 15 ಲಕ್ಷ ಜನ ಹಣ ಕೊಟ್ಟು ಟಿಕೆಟ್ ಪಡೆದು ಓಡಾಡ್ತಿದ್ದಾರೆ. ಇದರಲ್ಲಿ 1ಲಕ್ಷ ಪ್ರಯಾಣಿಕರು ಯುಪಿಐ ಮೂಲಕ ಹಣ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಈ ಅನುಕೂಲಕರ ಸೌಲಭ್ಯಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.