ಇಂದು ಕಾಂಗ್ರೆಸ್ ರಾಜ್ಯ ಸಮಾವೇಶ: ಕರಾವಳಿ ಜಿಲ್ಲೆ ಆಯ್ಕೆ ಯಾಕೆ?
Saturday, February 17, 2024
ಮಂಗಳೂರು: ಎಐಸಿಸಿ ಅಧ್ಯಕ್ಷರಾದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಮಹಾಸಮಾವೇಶ ಆಯೋಜಿಸುತ್ತಾ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಸಮಾವೇಶವನ್ನು ಆಯೋಜಿಸಲಾಗಿದೆ. ಆದ್ದರಿಂದ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ದ.ಕ.ಜಿಲ್ಲೆಯಿಂದಲೇ ಸಮಾವೇಶ ಆಯೋಜಿಸಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯಿಂದ ಇಬ್ಬರು ಸಿಎಂ, 6 ಮಂದಿ ಕೇಂದ್ರ ಸಚಿವರು ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದ ನಾಯಕರನ್ನು ನೀಡಲಾಗಿದೆ. ಆದ್ದರಿಂದ ಕರಾವಳಿಯಿಂದಲೇ ರಾಜ್ಯ ಸಮಾವೇಶ ಆರಂಭಿಸಲು ನಿರ್ಧರಿಸಲಾಗಿದೆ.
ರಾಷ್ಟ್ರ, ರಾಜ್ಯಮಟ್ಟದ ನಾಯಕರನ್ನು ನೀಡಿ ಸಚಿವ ಸ್ಥಾನಗಳನ್ನು ಪಡೆದ ಹಿರಿಮೆ ದ.ಕ.ಜಿಲ್ಲೆಗಿದೆ. ಆದರೆ ಸದ್ಯ ಹಿಂದುತ್ವದ ಆಧಾರದಲ್ಲಿ ಕರಾವಳಿಯ ಜಿಲ್ಲೆಗಳು ಕೇಸರಿ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಟಾರ್ಗೆಟ್ ಮಲ್ಲಿಕಾರ್ಜುನ ಖರ್ಗೆ ಅವರದ್ದಾಗಿದೆ. ಅದಕ್ಕಾಗಿಯೇ ಕರಾವಳಿಯಲ್ಲೇ ಸಮಾವೇಶ ಆಯೋಜಿಸಲಾಗಿದೆ. ಈ ಮೂಲಕ ರಾಜ್ಯದ ಕಾಂಗ್ರೆಸ್ ನಾಯಕರು, ಪಕ್ಷದ ಕಾರ್ಯಕರ್ತರಲ್ಲಿ ಬಲ ತುಂಬುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.