-->
ನಿಮ್ಮ ಮನೆಯಲ್ಲಿ ಈ ಗಿಡಗಳನ್ನು ನೆಡುವುದರಿಂದ ನಿಮಗೆ ಎಂದಿಗೂ ಆರ್ಥಿಕ ಸ್ಥಿತಿಯಲ್ಲಿ ಕೊರತೆ ಬರುವುದಿಲ್ಲ...!

ನಿಮ್ಮ ಮನೆಯಲ್ಲಿ ಈ ಗಿಡಗಳನ್ನು ನೆಡುವುದರಿಂದ ನಿಮಗೆ ಎಂದಿಗೂ ಆರ್ಥಿಕ ಸ್ಥಿತಿಯಲ್ಲಿ ಕೊರತೆ ಬರುವುದಿಲ್ಲ...!


ಮಂಗಲ ದೋಷ ನಿವಾರಣೆಗೆ?

ದಾಸವಾಳ ಗಿಡವನ್ನು ಬೆಳೆಸುವುದರಿಂದ ಬಂಧಗಳು ಬಲಗೊಳ್ಳುತಾರೆ. ಅಲ್ಲದೇ ಕುಟುಂಬದಲ್ಲಿನ ಕಲಹಗಳು ಬಗೆಹರಿಯುವುದರೊಂದಿಗೆ ಸಂತೋಷವು ಉಕ್ಕಿ ಹರಿಯುತ್ತದೆ. ದಾಂಪತ್ಯ ಜೀವನ ಸುಗಮವಾಗಲಿದೆ. ಪೂಜೆಯ ಸಮಯದಲ್ಲಿ, ದಾಸವಾಳದ ಹೂವುಗಳನ್ನು ದುರ್ಗಾ ದೇವಿ, ಲಕ್ಷ್ಮಿ ದೇವಿ ಮತ್ತು ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ದೋಷಗಳು ಪರಿಹಾರವಾಗುತ್ತದೆ .

ಆರ್ಥಿಕವಾಗಿ ಸುಸ್ಥಿರ

ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಮನೆಯಲ್ಲಿ ದಾಸವಾಳದ ಗಿಡವನ್ನು ಬೆಳೆಸಬೇಕು. ಪರಿಣಾಮವಾಗಿ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತವೆ. ಆಸ್ತಿ ವಿವಾದಗಳು ಬಗೆಹರಿಯಲಿವೆ. ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. 

 ಮನೆಗೆ ಧನಾತ್ಮಕ ಶಕ್ತಿ

ಕೌಟುಂಬಿಕ ಕಲಹಗಳನ್ನು ತಪ್ಪಿಸಲು ದಾಸವಾಳ ಗಿಡವನ್ನು ಮನೆಯ ಆವರಣದಲ್ಲಿ ನೆಡಬೇಕು. ಇದು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ.

ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು

ನೀವು ವ್ಯಾಪಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆಗ ಮನೆಯಲ್ಲಿ ದಾಸವಾಳದ ಗಿಡವನ್ನು ನೆಡಬೇಕು. ಈ ದಾಸವಾಳದ ಹೂಗಳನ್ನು ನೀರಿನಲ್ಲಿ ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಆ ನಂತರ ಆ ನೀರನ್ನು ದಾಸವಾಳ ಗಿಡಕ್ಕೆ ಸುರಿಯಿರಿ. ಇದು ವ್ಯಾಪಾರ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವಿರಿ.

Ads on article

Advertise in articles 1

advertising articles 2

Advertise under the article