-->
ರೀಲ್ಸ್ ನಲ್ಲಿ ಬ್ಯುಸಿಯಾಗಿದ್ದ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ

ರೀಲ್ಸ್ ನಲ್ಲಿ ಬ್ಯುಸಿಯಾಗಿದ್ದ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ


ಜೈಪುರ: ಪತಿಯಿಂದ ದೂರವಿದ್ದ ಈಕೆ ತನ್ನದೇ ಸೀರೆ ಅಂಗಡಿ ತೆರೆದು, ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಕೊಂಡು ಸಂತೃಪ್ತ ಜೀವನ ನಡೆಸುತ್ತಿದ್ದಳು. ಆದರೆ ಹೀಗೆ ಆರಾಮದಲ್ಲಿ ಜೀವನ ನಡೆಸುತ್ತಿದ್ದ ಈಕೆಗೆ ಪತಿಯೇ ಯಮನಂತೆ ಎದುರಾಗಿ ಗುಂಡಿಕ್ಕಿ ಕೊಂದಿದ್ದಾನೆ. ತಾನು ಕುಳಿತ ಜಾಗದಲ್ಲೇ ಈಕೆ ನರಳಾಡಿ ಪ್ರಾಣ ಬಿಟ್ಟಿದ್ದಾಳೆ.

ಹೀಗೆ ಪ್ರಾಣ ಬಿಟ್ಟಾಕೆಯ ಹೆಸರು ಅನಾಮಿಕ ಬಿಷ್ಣೋಯಿ. ರಾಜಸ್ಥಾನ ರಾಜ್ಯದ ನಿವಾಸಿ. ಇನ್​​ಸ್ಟಾಗ್ರಾಂನಲ್ಲಿ ಈಕೆಗೆ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ ಗಳು ಇದ್ದರು. ರಾಜಸ್ಥಾನದಲ್ಲಿ ಈಕೆಯ ರೀಲ್ಸ್​ಗಳು ಮಿಲಿಯನ್​​ಗಟ್ಟಲೇ ಓಡುತ್ತದೆ. ಇದೀಗ ಅನಾಮಿಕಾ ಬಿಷ್ಣೋಯಿಗೆ ತಾಳಿ ಕಟ್ಟಿದ ಪತಿ ಮಹಿರಾಮ್ ನೇ ಗುಂಡಿಕ್ಕಿ ಆಕೆಯ ಉಸಿರು ನಿಲ್ಲಿಸಿದ್ದಾನೆ. 

ಅನಾಮಿಕಾಗೂ ಮಹಿರಾಮ್​ಗೂ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು ಇದ್ದಾರೆ. ಮದುವೆ ಆಗೋದಕ್ಕಿಂತ ಮೊದಲಿನಿಂದಲೂ ಅನಾಮಿಕಾಗೆ ರೀಲ್ಸ್ ಹುಚ್ಚು ಇತ್ತು. ವೀಡಿಯೋದಲ್ಲಿ ಗ್ಲಾಮರ್ ಆಗಿ ಕಾಣಿಸ್ಕೊಂಡು ಮಾಡರ್ನ್​ ಲೈಫ್​​ನ್ನು ಅನಾಮಿಕ ಎಂಜಾಯ್ ಮಾಡುತ್ತಿದ್ದಳು. ಹಾಗೆಂದು ಮದುವೆಯಾದ್ಮೇಲೆ ಪತಿ ಇದಕ್ಕೆಲ್ಲ ವಿರೋಧ ಮಾಡಿರಲಿಲ್ಲ. ಅವಳಿಗೆ ಏನ್ ಬೇಕೋ ಎಲ್ಲ ಮಾಡಿಕೊಟ್ಟಿದ್ದ. ಆಕೆಯ ಎಲ್ಲಾ ಆಸೆಯನ್ನು ಈಡೇರಿಸುತ್ತಿದ್ದ. ಆದ್ಲರೆ ಪತ್ನಿಗೋಸ್ಕರ ಇಷ್ಟೆಲ್ಲ ಮಾಡಿದ ಪತಿಯೇ ಆಕೆ ಉಸಿರು ನಿಲ್ಲಿಸಿಬಿಟ್ಟಿದ್ದಾನೆ.

ಹೌದು, ರೀಲ್ಸ್ ಮಾಡ್ತಾ ಮಾಡ್ತಾ ಅನಾಮಿಕ ಫುಲ್ ಪೇಮಸ್ ಆಗಿದ್ಳು. ಆಕೆ ಫಾಲೋವರ್ಸ್ ಕೂಡ ಹೆಚ್ಚಾಗಿದ್ರು. ಹೀಗಾಗಿ ಹೆಂಡತಿಯ ರೀಲ್ಸ್ ಹುಚ್ಚಾಟ ಪತಿಗೆ ಮಹಿರಾಮ್​ಗೆ ಇರುಸು ಮುರುಸು ಉಂಟು ಮಾಡಿತ್ತು. ಹೀಗಾಗಿ ರೀಲ್ಸ್ ಎಲ್ಲ ಬೇಡ ನೆಟ್ಟಗೆ ಸಂಸಾರ ಮಾಡ್ಕೊಂಡು ಇರಮ್ಮ ಅಂತ ಮಹಿರಾಮ್​ ಅನಾಮಿಕಳಿಗೆ ಹೇಳಿದ್ದಾನೆ. ಆದ್ರೆ ರೀಲ್ಸ್ ಗೀಳಿಗೆ ಬಿದ್ದಿದ್ದ ಅನಾಮಿಕಳಿಗೆ ಪತಿಯ ಮಾತು ಪಥ್ಯವಾಗಿಲ್ಲ. ಇದೇ ವಿಚಾರಕ್ಕೆ ಕಳೆದ ಮೂರು ವರ್ಷದಿಂದ ಗಂಡ ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು. ಕೊನೆಗೆ ಮಹಿರಾಮ್ ಆಕೆಯಿಂದ ಡಿವೋರ್ಸ್ ಪಡೆಯಲು ಅರ್ಜಿ ಕೂಡ ಹಾಕಿದ್ದ. ಆದ್ರೆ ಈ ಅನಾಮಿಕ ಡಿವೋರ್ಸ್ ಕೊಡದೇ ಪತಿಗೆ ಕಿರುಕುಳ ಕೊಡೋದಕ್ಕೆ ಶುರು ಮಾಡಿದ್ದಳು. ಇದ್ದ ಎರಡು ಮಕ್ಕಳನ್ನು ಕರ್ಕೊಂಡು ಹೋಗಿ ಅನಾಮಿಕ ಬೇರೆ ಊರಲ್ಲಿ ವಾಸ ಮಾಡೋದಕ್ಕೆ ಶುರು ಮಾಡಿದ್ಳು. ಮೂರು ವರ್ಷದಿಂದ ಗಂಡನಿಂದ ದೂರಾನೇ ಇರ್ತಿದ್ದ ಅನಾಮಿಕ ಸೀರೆ ಅಂಗಡಿಯೊಂದನ್ನ ಓಪನ್ ಮಾಡಿ ಬ್ಯುಸಿನೆಸ್ ಆರಂಭಿಸಿದ್ದಳು. ಇದೆಲ್ಲ ನೋಡಿ ಪತಿ ಮಹಿರಾಮ್​ಗೆ ಸಹಿಸಿಕೊಳ್ಳಲಾಗಿರಲಿಲ್ಲ. ಹೀಗಾಗಿ ಕೊನೆಗೆ ಪತ್ನಿ ಹತ್ಯೆಗೆ ಸಂಚು ಹಾಕಿ ಬಿಟ್ಟಿದ್ದ.
ಅನಾಮಿಕ ತನ್ನಿಂದ ದೂರ ಆಗಿದ್ರೂ ಆಕೆ ಮೋಹ ಮಹಿರಾಮ್​ಗೆ ಬಿಟ್ಟಿರಲಿಲ್ಲ. ನನಗೆ ಸಿಗದೇ ಇದ್ರೂ ಅವಳು ಬೇರೆ ಯಾರಿಗೂ ಸಿಗಬಾರದೆಂದಯ ಆಕೆ ಸೀರೆ ಅಂಗಡಿಗೆ ನುಗ್ಗಿದ್ದ ಮಹಿರಾಮ್​ ಗನ್​ನಿಂದ ಮೂರು ಬಾರಿ ಶೂಟ್ ಮಾಡಿ ಬಿಟ್ಟಿದ್ದ. ಅನಾಮಿಕಳ ಎದೆಗೆ ಗುಂಡು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಅನಾಮಿಕ ಉಸಿರು ಬಿಟ್ಟಿದ್ದಾಳೆ. ಅನಾಮಿಕಳನ್ನ ಹತ್ಯೆ ಮಾಡಿ ಮಹಿರಾಮನನ್ನ ಪೊಲೀಸರು 30 ಗಂಟೆಯೊಳಗೆ ಅರೆಸ್ಟ್ ಮಾಡಿದ್ದಾರೆ. 

Ads on article

Advertise in articles 1

advertising articles 2

Advertise under the article