ನಾನು ಸತ್ತಿಲ್ಲ- ಮಾಧ್ಯಮಗಳನ್ನು ಬಕ್ರಾ ಮಾಡಿದ ಪೂನಂ ಪಾಂಡೆ
Saturday, February 3, 2024
ಮುಂಬೈ: ನಾನಿನ್ನೂ ಸತ್ತಿಲ್ಲ, ಜೀವಂತವಾಗಿದ್ದೇನೆ ಎಂದು ನಟಿ ಪೂನಂ ಪಾಂಡೆ ಶನಿವಾರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತಮ್ಮ ಸಾವು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಆಗಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ಸದ್ದು ಮಾಡಿತ್ತು. ಪೂನಂ ಪಾಂಡೆ ಇನ್‌ಸ್ಟಾಗ್ರಾಂ ಪೇಜ್ ನಲ್ಲಿಯೇ ಅವರ ಕುಟುಂಬದವರು ಹಾಗೂ ಸ್ನೇಹಿತರು ಅವರ ಸಾವಿನ ಕುರಿತು ಪೋಸ್ಟ್ ಹಾಕಿದ್ದರು.
ಈ ಕುರಿತು ವೀಡಿಯೊ ಸಂದೇಶ ವೈರಲ್ ಮಾಡಿರುವ ಪೂನಂ ಪಿಂಡದ, 'ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ನಾನಿನ್ನೂ ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ. ಆದರೆ ದುರಂತದ ಸಂಗತಿಯೆಂದರೆ ಈ ರೋಗವನ್ನು ಹೇಗೆ ಎದುರಿಸಬೇಕೆಂದು ತಿಳಿಯದೇ ಸಾವಿರಾರು ಮಹಿಳೆಯರನ್ನು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ' ಎಂದು ಹೇಳಿದ್ದಾರೆ.