ವಿಷದ ಬಾಟಲಿ ನುಂಗಿದ ನಾಗರಹಾವು: ರಕ್ಷಣೆ ಮಾಡಿದ ಉರಗತಜ್ಞ
Thursday, February 8, 2024
ಉಡುಪಿ: ವಿಷದ ಬಾಟಲಿಯನ್ನು ನಾಗರಹಾವೊಂದು ನುಂಗಿ ಒದ್ದಾಡುತ್ತಿದ್ದ ಘಟನೆ ಉಡುಪಿ ಜಿಲ್ಲೆಯ ನೀರೆ ಬೈಲೂರಿನಲ್ಲಿ ನಡೆದಿದೆ. ಬಳಿಕ ಬಾಟಲಿಯನ್ನು ಸೇಫಾಗಿ ಹೊರತೆಗೆಯಲಾಯಿತು.
ಕೃಷಿಸಂಬಂಧಿ ಕೆಲಸಕ್ಕೆಂದು ತಂದಿಟ್ಟ ವಿಷಯುಕ್ತ ಬಾಟಲಿಯನ್ನು ನಾಗರಹಾವು ನುಂಗಿತ್ತು. ತಕ್ಷಣ ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್ ಗೆ ಕರೆ ಮಾಡಲಾಯಿತು.
ಸ್ಥಳಕ್ಕೆ ಆಗಮಿಸಿದ ಗುರುರಾಜ್ ಸನಿಲ್ ಹಾವನ್ನು ಹಿಡಿದು ಪೂರ್ತಿ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ಹೊರ ತೆಗೆದಿದ್ದಾರೆ. ಬಳಿಕ ಸ್ಥಳೀಯರ ವಿನಂತಿಯ ಮೇರೆಗೆ ಹಾವನ್ನು ನೀರೆ ಬೈಲೂರು ಸಮೀಪದ ಕಾಡಿಗೆ ಬಿಡಲಾಗಿದೆ.