ಮಂಗಳೂರು: ಬಸ್ ಉದ್ಯಮಿ ಆತ್ಮಹತ್ಯೆಗೆ ಶರಣು - ಬ್ಯಾಂಕ್ ಕಿರುಕುಳ ಶಂಕೆ
Wednesday, February 28, 2024
ಮಂಗಳೂರು: ಬಸ್ ಉದ್ಯಮಿ, ನಗರದ ಬಜಾಲ್ ನಿವಾಸಿ ಪ್ರಜ್ವಲ್ ಡಿ.(35) ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಬಸ್ ಭವಾನಿಯ ಮಾಲಕ ದಿ. ದೇವೇಂದ್ರರವರ ಎರಡನೇ ಪುತ್ರ ಪ್ರಜ್ವಲ್ ಅವರು ತಮ್ಮ ಸಹೋದರನೊಂದಿಗೆ ಸೇರಿ ಬಸ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಇವರು ಜೆ.ಎಂ. ರೋಡ್‌ನಲ್ಲಿರುವ ಸ್ವಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾಲ ಹೊಂದಿದ್ದ ಇವರಿಗೆ ಬ್ಯಾಂಕ್‌ನಿಂದ ಕಿರುಕುಳವಿತ್ತು ಎಂಬ ಆರೋಪವಿದೆ. ಆದರೆ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.