ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೆ ತೀರುತ್ತದೆ: ಸುನಿಲ್ ಕೆ ಆರ್
Friday, February 2, 2024
ಮಂಗಳೂರು; ಮಳಲಿ ಮಸೀದಿ ಕಟ್ಟಡ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿದಿದೆ. ಮಳಲಿಯಲ್ಲಿ ಕೂಡ ಮಂದಿರ ನಿರ್ಮಾಣ ಆಗಿಯೆ ತೀರುತ್ತದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಳಲಿ ಮಸೀದಿ ಕಟ್ಟಡದ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಅದು ವಕ್ಫ್ ಬೋರ್ಡ್ ಆಸ್ತಿಯಲ್ಲ ಎಂಬ ತೀರ್ಪು ಕೂಡ ಬಂದಿರುವುದು ಖುಷಿ ವಿಚಾರ. ಇಸ್ಲಾಂ ಈ ದೇಶಕ್ಕೇ ಆಕ್ರಮಣ ಮಾಡಿರುವಂತಹದು. ಇದು ಹಿಂದುಗಳ ದೇಶ. ಎಲ್ಲೆಲ್ಲಿ ಅಕ್ರಮಣ ಮಾಡಿ ಮಸೀದಿ ನಿರ್ಮಾಣವಾಗಿದೆಯೊ ಅದು ಮಂದಿರಗಳೆ ಆಗಿತ್ತು. ಅಕ್ರಮಣ ಮಾಡಿದ ಮಸೀದಿಗಳಲ್ಲಿ ಹಿಂದೂ ಕುರುಹು ಇದ್ದೆ ಇರುತ್ತದೆ ಎಂದರು.