ದಿಂಬಿನ ಉಡುಗೆಯೊಂದಿಗೆ ಪ್ರತ್ಯಕ್ಷವಾದ ಉರ್ಫಿ ಜಾವೇದ್ : ಹಾಸಿಗೆ ಎಲ್ಲಿ? ಎಂದು ಪ್ರಶ್ನಿಸಿದ ನೆಟ್ಟಿಗರು
Wednesday, February 7, 2024
ಮುಂಬೈ: ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಚಿತ್ರವಿಚಿತ್ರ ದಿರಿಸುಗಳಿಂದಲೇ, ಅರೆಬರೆ ದೇಹ ಪ್ರದರ್ಶನದಿಂದಲೇ ಸಖತ್ ಫೇಮಸ್. ಉರ್ಫಿ ಜಾವೇದ್ ಈ ಸಲದ ವೇಷ ಸಖತ್ ವೈರಲ್ ಆಗಿದೆ.
ಉರ್ಫಿ ಜಾವೇದ್ ಸದ್ಯ ನೀಲಿ ಬಣ್ಣದ ಡ್ರೆಸ್ ಧರಿಸಿರುವ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಶೇಷವೇನೆಂದರೆ ಅವರು ಈ ಉಡುಪನ್ನು ದಿಂಬಿನೊಂದಿಗೆ ತೊಟ್ಟಿದ್ದಾರೆ. ಇದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.
ಉರ್ಫಿ ಜಾವೇದ್ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯ. ಆದರೆ, ಈಗ ಜನರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಓರ್ವ ನೆಟ್ಟಿಗ ಈ ಬಗ್ಗೆ ಕಮೆಂಟ್ ಮಾಡಿ “ಇಂತಹ ಸೋಮಾರಿಗಳಿಗೆ ಇದೇ ಪರಿಪೂರ್ಣ ಉಡುಗೆ. ಮತ್ತೋರ್ವರು ತಮಾಷೆಯಾಗಿ “ಉರ್ಫಿ ತನ್ನದೇ ಆದ ಚೀಲ ಮತ್ತು ಹಾಸಿಗೆಯನ್ನು ಹೊತ್ತಿದ್ದಾಳೆ.” ಎಂದಿದ್ದಾರೆ.
ಈ ವಿಡಿಯೋಗೆ ಸಂಬಂಧಿಸಿದಂತೆ ಕೆಲವರು ನಟಿಯ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ವಿಲಕ್ಷಣ ಡ್ರೆಸಿಂಗ್ ನಿಂದಲೇ ಉರ್ಫಿಗೆ ಫ್ಯಾನ್ ಫಾಲೋವರ್‌ಗಳನ್ನು ಹೆಚ್ಚಾಗುತ್ತಿದ್ದಾರೆ. ಅವರು ಹಾಕುವ ಬಹುತೇಕ ಬಟ್ಟೆಗಳು ಟ್ರೋಲ್ ಕಾರಣವಾದರೂ, ನಗಿಸಿಕೊಂಡರೂ, ಉಗಿಸಿಕೊಂಡರೂ ಕ್ಯಾರೇ ಎನ್ನದೆ ಮರುದಿನವೇ ಉರ್ಫಿ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗುತ್ತಾರೆ.