ಷೇರು ವಹಿವಾಟಿನಲ್ಲಿ ಲಾಭ ತೋರಿಸಿ 1.06 ಕೋಟಿ ರೂ. ವಂಚನೆ : ನಾಲ್ವರ ವಿರುದ್ಧ ಪ್ರಕರಣ ದಾಖಲು
Thursday, March 7, 2024
ಮುಂಬೈ: ಷೇರು ವಹಿವಾಟಿನಲ್ಲಿ ಲಾಭದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 1.06 ಕೋಟಿ ರೂ. ವಂಚಿಸಿರುವ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ಈ ಬಗ್ಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ನವಿ ಮುಂಬೈನ ತಲೋಜಾ ಎಂಬಲ್ಲಿ ಇಂಜಿನಿಯರಿಂಗ್ ಘಟಕವನ್ನು ಹೊಂದಿರುವ ವ್ಯಕ್ತಿಯನ್ನು ಸಂಪರ್ಕಿಸಿ ಷೇರು ವಹಿವಾಟಿನಲ್ಲಿ ಹೆಚ್ಚಿನ ಆದಾಯ ಗಳಿಸುವ ಆಮಿಷ ಒಡ್ಡಿದ್ದಾರೆ. ಕಳೆದೆರಡು ತಿಂಗಳಿನಿಂದ ಹಣ ಕಳೆದುಕೊಂಡ ವ್ಯಕ್ತಿ ಆನ್‌ಲೈನ್ ಮೋಡ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ 1,06,28,000 ರೂ. ಜಮೆ ಮಾಡಿದ್ದರು. ಆದರೆ ಅವರು ಹೂಡಿಕೆ ಮಾಡಿದ ಮೊತ್ತ ಮತ್ತು ಆದಾಯವನ್ನು ಪಡೆಯದಿದ್ದಾಗ ಪೊಲೀಸರನ್ನು ಸಂಪರ್ಕಿಸಿದರು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗಜಾನನ್ ಕದಮ್ ಹೇಳಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.