ಐಪಿಎಲ್ ಬೆಟ್ಟಿಂಗ್ ಗೀಳಿಗೆ 1.5 ಕೋಟಿ ರೂ. ಕಳೆದುಕೊಂಡ ಪತಿ: ಪ್ರಾಣ ಕಳೆದುಕೊಂಡ ಪತ್ನಿ
Wednesday, March 27, 2024
ಬೆಂಗಳೂರು: ಪತಿಯ ಐಪಿಎಲ್ ಬೆಟ್ಟಿಂಗ್ ಗೀಳಿಗೆ ಪತ್ನಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ರಂಜಿತಾ (24) ಆತ್ಮಹತ್ಯೆ ಮಾಡಿಕೊಂಡವರು.
ರಂಜಿತಾ ಪತಿ ದರ್ಶನ್ ಬಾಬು ಐಪಿಎಲ್ ಬೆಟ್ಟಿಂಗ್‌ಗಾಗಿ ಹಣ ತೊಡಗಿಸುವ ಸಲುವಾಗಿ 1.5 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿದ್ದರು. ಸಾಲ ಕೊಟ್ಟವರು ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ರಂಜಿತಾ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮಾರ್ಚ್ 19ರಂದು ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದರ್ಶನ್ ಬಾಬು ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೊಳಲ್ಕೆರೆಯ ಆಕೆಯ ಮನೆಯ ಬೆಡ್ ರೂಂನಲ್ಲಿ ಮಾರ್ಚ್ 19ರಂದು ಮೃತದೇಹ ಪತ್ತೆಯಾಗಿತ್ತು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಸಾಲ ನೀಡಿರುವ ವ್ಯಕ್ತಿಯೇ ಕಾರಣ ಎಂದು ಆಕೆ ತಿಳಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ರಂಜಿತಾ ತಂದೆ ವೆಂಕಟೇಶ್ ಎಂಬವರು ತನ್ನ ಅಳಿಯ ದರ್ಶನ್ ಗೆ ಕಾನೂನುಬಾಹಿರವಾಗಿ ಸಾಲ ನೀಡಿರುವ 13 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಪತಿ ದರ್ಶನ್ ಮತ್ತು ತನಗೆ ಸಾಲ ನೀಡಿದವರು ಬಹಳ ಕಿರುಕುಳ ನೀಡುತ್ತಿದ್ದರು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮೃತ ರಂಜಿತಾ ಎಂದು ಸುಸೈಡ್ ನೋಟಿನಲ್ಲಿ ತಿಳಿಸಿದ್ದಾರೆ. ದಂಪತಿಗೆ 2 ವರ್ಷದ ಪುತ್ರನಿದ್ದಾನೆ.
ಇನ್ನು ವೆಂಕಟೇಶ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 306 ಅಡಿ 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಶಿವು, ಗಿರೀಶ್ ಮತ್ತು ವೆಂಕಟೇಶ್ ಎಂಬುವವರನ್ನು ಬಂಧಿಸಲಾಗಿದ್ದು, ಉಳಿದವರು ತಲೆಮಾರಿಸಿಕೊಂಡಿದ್ದಾರೆ. ತಲೆಮಾರಿಸಿಕೊಂಡಿರುವವರಿಗೆ ಬಲೆ ಬೀಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಚಿತ್ರದುರ್ಗ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.