-->
ಒಂದು ಗಂಟೆ ಕಾಲ ಫೇಸ್ ಬುಕ್, ಇನ್ ಸ್ಟಾಗ್ರಾಂ ಸ್ಥಗಿತ -3 ಬಿಲಿಯನ್‌ ಡಾಲ‌ರ್ ಕಳೆದುಕೊಂಡ ಝುಕರ್ ಬರ್ಗ್

ಒಂದು ಗಂಟೆ ಕಾಲ ಫೇಸ್ ಬುಕ್, ಇನ್ ಸ್ಟಾಗ್ರಾಂ ಸ್ಥಗಿತ -3 ಬಿಲಿಯನ್‌ ಡಾಲ‌ರ್ ಕಳೆದುಕೊಂಡ ಝುಕರ್ ಬರ್ಗ್

ಹೊಸದಿಲ್ಲಿ: ಮೆಟಾ ಸಂಸ್ಥೆಯ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಂ ಮಂಗಳವಾರ ಒಂದು ಗಂಟೆ ಕಾಲ ಜಾಗತಿಕ ಸ್ಥಗಿತವನ್ನು ಎದುರಿಸಿತ್ತು. ಇದರಿಂದ ಒಂದೇ ದಿನದಲ್ಲಿ ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ 3 ಬಿಲಿಯನ್‌ ಡಾಲ‌ರ್ (ಸುಮಾರು 24,871 ಕೋಟಿ ರೂ.) ಕಳೆದುಕೊಂಡಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಝುಕರ್ ಬರ್ಗ್  ಒಟ್ಟು ಸಂಪತ್ತು ಒಂದೇ ದಿನದಲ್ಲಿ 2.79 ಬಿಲಿಯನ್ ಡಾಲರ್ ಇಳಿಕೆಯಾಗಿ 176 ಬಿಲಿಯನ್ ಡಾಲರ್‌ಗೆ ತಲುಪಿದೆ.

ಒಂದು ಗಂಟೆ ಕಾಲ ಇದ್ದ ಜಾಗತಿಕ ಸ್ಥಗಿತ ಮೆಟಾ ಷೇರುಗಳ ಮೌಲ್ಯವನ್ನು ಶೇ 1.6ರಷ್ಟು ಕುಸಿತ ಕಂಡು ಝುಕರ್ ಬರ್ಗ್ ಅವರ ಸಂಪತ್ತಿನ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಯಿತು. ಮಂಗಳವಾರದ ಟ್ರೇಡಿಂಗ್ ಅವಧಿ ವಾಲ್‌ಸ್ಟ್ರೀಟ್‌ನಲ್ಲಿ ಅಂತ್ಯವಾಗುವ ವೇಳೆ ಮೆಟಾ ಷೇರು ಬೆಲೆ 490.22 ಆಗಿತ್ತು.

Ads on article

Advertise in articles 1

advertising articles 2

Advertise under the article