ಹಲವು ನಟಿಯರೊಂದಿಗೆ ಸಂಬಂಧ ಹೊಂದಿದ್ದ ಬಾಲಿವುಡ್ ನ 90ರ ದಶಕದ ಈ ನಟ ಈಗಲೂ ಬ್ರಹ್ಮಚಾರಿ
Saturday, March 23, 2024
ಮುಂಬೈ: 90ರ ದಶಕದಲ್ಲಿ ಅನೇಕ ನಟರು ಬಾಲಿವುಡ್ ಪ್ರವೇಶಿಸಿದ್ದಾರೆ. ಅವರಲ್ಲಿ ಕೆಲವರು ವಿಫಲವಾದರೂ ಇದ್ದಾರೆ. ಆದರೆ ಯಾವುದಾದರೂ ಕಾರಣಕ್ಕೆ ಅವರುಗಳ ಬಗ್ಗೆ ಚರ್ಚೆಗಳ ನಡೆಯುತ್ತಿರುತ್ತದೆ. ಅವರಲ್ಲೊಬ್ಬರು ಅರ್ಮಾನ್ ಕೊಹ್ಲಿ. ಅರ್ಮಾನ್ ಈ ವರ್ಷ ತಮ್ಮ 52 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಮಾರ್ಚ್ 23, 1972 ರಂದು ಮುಂಬೈನಲ್ಲಿ ಜನಿಸಿದ ಅರ್ಮಾನ್ ಕೊಹ್ಲಿ ತಂದೆ ಚಲನಚಿತ್ರ ನಿರ್ದೇಶಕ ರಾಜಕುಮಾರ್ ಕೊಹ್ಲಿ. ಅರ್ಮಾನ್ 1992 ರಲ್ಲಿ ವಿರೋಧಿ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. 90 ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದರು.
ಅರ್ಮಾನ್ ಕೊಹ್ಲಿ 'ದುಷ್ಮನ್ ಜಮಾನಾ', 'ಅನಮ್', 'ಕಹಾರ್' ಮತ್ತು 'ಜಾನಿ ದುಷ್ಮನ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅರ್ಮಾನ್ ಕೊಹ್ಲಿ ಅವರ ಚಲನಚಿತ್ರ ವೃತ್ತಿಜೀವನವು ಅಂಥ ವಿಶೇಷವಾಗಿರಲಿಲ್ಲ. ಬಳಿಕ ಅವರು ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.
ಅರ್ಮಾನ್ ಕೊಹ್ಲಿ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಇದೇ ಕಾರ್ಯಕ್ರಮದಲ್ಲಿ ಅವರು ಕಾಜೋಲ್ ಅವರ ಸಹೋದರಿ ತನಿಶಾ ಮುಖರ್ಜಿ ಅವರನ್ನು ಭೇಟಿಯಾದರು. ತನಿಶಾ ಮತ್ತು ಅರ್ಮಾನ್ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು. ಮನೆಯಿಂದ ಹೊರಬಂದ ಬಳಿಕ, ಅವರು ಸ್ವಲ್ಪ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ನಂತರ ಬೇರೆಯಾಗಿದ್ದರು.
ಅರ್ಮಾನ್ 2013 ರಲ್ಲಿ 'ಬಿಗ್ ಬಾಸ್' 7 ರಲ್ಲಿ ತನಿಶಾ ಅವರನ್ನು ಭೇಟಿಯಾಗುವ ಮೊದಲು ಟಿವಿ ಶೋ 'ತಾರಕ್ ಮೆಹ್ರಾ ಕಾ ಊಲ್ತಾ ಚಲ್ಮಾ' ಖ್ಯಾತಿಯ ಮುನ್ಮುನ್ ದತ್ತಾ (ಬಬಿತಾ ಜಿ) ಜೊತೆ ಸಂಬಂಧ ಹೊಂದಿದ್ದರು. ವರದಿಗಳ ಪ್ರಕಾರ, ಅರ್ಮಾನ್ ರೊಂದಿಗೆ ಸಂಬಂಧ ಹೊಂದಿದ ಮುನ್ಮುನ್ ಕೆಲವು ವರ್ಷಗಳ ನಂತರ ಅರ್ಮಾನ್ ಮೇಲೆ ಹಲ್ಲೆ ಮತ್ತು ಕೆಟ್ಟ ನಡವಳಿಕೆ ಕುರಿತು ಆರೋಪಿಸಿದರು. ಇಬ್ಬರ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಮುನ್ಮುನ್ ದತ್ತಾ, ತನಿಶಾ ಮುಖರ್ಜಿಯಾದ ಮೇಲೆ ಅರ್ಮಾನ್ ಕೊಹ್ಲಿ ಸುಮಾರು ಒಂದೂವರೆ ವರ್ಷಗಳ ನಂತರ ಫ್ಯಾಷನ್ ಸ್ಟೈಲಿಸ್ಟ್ ನೀರೂ ರಾಂಧವಾ ಜೊತೆ ಸಂಬಂಧ ಹೊಂದಿದ್ದರು. 2018 ರಲ್ಲಿ, ನೀರೂ ಅವರು, ಅರ್ಮಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ ವರದಿ ಹೊರಬಂದಿತು. ಕೊನೆಗೆ ಅರ್ಮಾನ್ ರಿಮಾಂಡ್‌ನಲ್ಲಿದ್ದು, ಜೈಲು ಶಿಕ್ಷೆಗೆ ಒಳಗಾಗಿದ್ದರು.