ಬೆಳ್ತಂಗಡಿ: ಸ್ಕೂಟರ್ ಡಿಕ್ಕಿಯಾಗಿ ನಟ ವಿಜಯ ರಾಘವೇಂದ್ರ ಪತ್ನಿ ದಿ.ಸ್ಪಂದನಾ ಮಾವ ಬಲಿ
Friday, March 29, 2024
ಬೆಳ್ತಂಗಡಿ: ಸ್ಕೂಟರ್ ಡಿಕ್ಕಿ ಹೊಡೆದು ನಟ ವಿಜಯ ರಾಘವೇಂದ್ರ ಪತ್ನಿ ದಿ.ಸ್ಪಂದನಾ ಮಾವ ಹೇರಾಜೆ ಶೇಖರ ಬಂಗೇರರವರು ಮೃತಪಟ್ಟ ಘಟನೆ ಗುರುವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ನಡೆದಿದೆ.
ಮೃತ ಹೇರಾಜೆ ಶೇಖರ ಬಂಗೇರರವರು ದಿ.ಸ್ಪಂದನಾ ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ತಾಯಿಯ ಸಹೋದರರಾಗಿದ್ದಾರೆ.
ಹೆರಾಜೆ ಶೇಖರ ಬಂಗೇರ ಗುರುವಾರ ರಾತ್ರಿ ಸಂತೆಕಟ್ಟೆಯಲ್ಲಿ ಫುಡ್ ಪಾರ್ಸೆಲ್ ಮಾಡಿಕೊಂಡು ರಸ್ತೆ ದಾಟುತ್ತಿದ್ದರು. ಈ ವೇಳೆ ಯುವತಿಯೊಬ್ಬಳು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಶೇಖರ ಬಂಗೇರ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಗೂ ಗಂಭೀರ ಗಾಯಗೊಂಡಿದೆ.