ಕಾಸರಗೋಡು: ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಮೃತ್ಯು
Friday, March 8, 2024
ಕಾಸರಗೋಡು: ಟಿಪ್ಪರ್ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಪ್ಪಳ ನಯಬಜಾರ್ ನಾಟೇಕಲ್ ನಿವಾಸಿ ಮುಹಮ್ಮದ್ ಮಿಸ್ಸಾಹ್ (21) ಮೃತಪಟ್ಟ ಯುವಕ.
ಮಿಸ್ಸಾಹ್ ಬೈಕಿನಲ್ಲಿ ಕಾಸರಗೋಡಿಗೆ ತೆರಳಿ ಮಿಸ್ಲಾಬ್ ನೊಂದಿಗೆ ಮರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಮೃತಯುವಕ ಹಾಗೂ ಗಾಯಾಳು ಇಬ್ಬರೂ ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.